
ಚಿತ್ತಾಪುರ;ಡಿ.13: ತಾಲೂಕಿನ ಮಾಡಬೂಳ ಪೆÇಲೀಸ್ ಠಾಣೆ ಸಮೀಪ ಕಾರ್ ಮತ್ತು ಜೀಪ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತ ಪಟ್ಟಿದ್ದು, ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ.
ಹರಳಯ್ಯ ಎನ್ನುವವರು ಸ್ಥಳದಲ್ಲೇ ಮೃತ ಪಟ್ಟ ದುರ್ದೈವಿ.
ಕಾರ್’ನಲ್ಲಿದ್ದವರು ಸೇಡಂನಿಂದ ಕಲಬುರಗಿಗೆ ತೆರಳುತ್ತಿದ್ದರು. ಜೀಪ್’ನಲ್ಲಿದ್ದವರು ಕಲಬುರಗಿಯಿಂದ ಮಳಖೇಡ್’ಗೆ ತೆರಳುತ್ತಿದ್ದಾಗ ಈ ಘಟನೆ ಜರಗಿದೆ. ಕೂಡಲೇ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಾಡಬೂಳ ಪಿಎಸ್’ಐ ಗೌತಮ್, ಕ್ರೈಂ ಪಿಎಸ್’ಐ ಸಿದ್ಧಲಿಂಗ, ಪಿ.ಎಸ್ ವನಂಜಕರ್, ಸಿಬ್ಬಂದಿಗಳಾದ ವೀರಶೆಟ್ಟಿ, ಪ್ರೇಮ್, ಕೊಟ್ರೇಶ, ಚಂದ್ರಶೇಖರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























