ತಂಪುಪಾನೀಯ ವಿತರಣೆ


ನವಲಗುಂದ,ಮಾ.೪: ಸುಪ್ರಸಿದ್ದ ನವಲಗುಂದ ಶ್ರೀ ರಾಮಲಿಂಗ ಕಾಮಣ್ಣ ದೇವರು ಬೇಡಿದ್ದನ್ನು ಕರುಣಿಸುವ ಇಷ್ಟಾರ್ಥ ಈಡೇರಿಸುವ ದೇವರಾದ ರಾಮಲಿಂಗ ಕಾಮಣ್ಣನ ಆಶೀರ್ವಾದ ಪಡೆಯಲು ಲಕ್ಷಾಂತರ ಭಕ್ತರು ರಾಜ್ಯ ಹೊರ ರಾಜ್ಯಗಳಿಂದ ಆಗಮಿಸಿ ಬಿಸಿಲು, ಝಳ ಲೆಕ್ಕಸಿದೆ ಭಕ್ತಿಯಲ್ಲಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಭಾಗವಹಿಸಿದ್ದು ನೋಡಿದರೆ. ನಮ್ಮ ತಾಲೂಕಿನ ಹೆಮ್ಮೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ದೇವರಾಜ ಧಾಡಿಭಾವಿ ಹೇಳಿದರು.


ಅವರು ಪಟ್ಟಣದ ರಾಮಲಿಂಗ ಕಾಮಣ್ಣ ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೇವರಾಜ ದಾಡಿಬಾವಿ ಗೆಳೆಯರ ಬಳಗದ ಹಮ್ಮಿಕೊಂಡದ್ದ ತಂಪು ಪಾನೀಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸಂಭ್ರಮದಿAದ ಹೋಳಿ ಆಚರಣೆ ಮಾಡಿ ಚಿಕ್ಕ-ಪುಟ್ಟ ಮಕ್ಕಳು ಕಣ್ಣು-ಕಿವಿ-ಮೂಗುಗಳಿಗೆ ಬಣ್ಣ ಹೋಗದಂತೆ ಜಾಗೃತಿ ವಹಿಸಿ ಎಂದರು
ಈ ವೇಳೆಯಲ್ಲಿ ಪವನ್ ಪಾಟೀಲ, ಸಿದ್ದು ಪೂಜಾರ, ಮಂಜುನಾಥ ಚಿನ್ನಾಟಗಿ, ದುರ್ಗಪ್ಪ ನಾಗಣ್ಣವರ, ಕೃಷ್ಣಾ ಭೋವಿ, ಪರಶುರಾಮ ಭೋವಿ, ಮಂಜುನಾಥ ಜಾಲಗಾರ, ಮೃತ್ಯುಂಜಯ ಕುರುವತ್ತಿಮಠ, ಶಿವುಕುಮಾರ ಕುಲಕರ್ಣಿ, ಸಚಿನ್ ಬಾಂಡೆಗೆ ಸೇರಿದಂತೆ ದೇವರಾಜ ಧಾಡಿಭಾವಿ ಗೆಳೆಯರ ಹಾಗೂ ಅಭಿಮಾನಿ ಬಳಗ ಉಪಸ್ಥಿತರಿದ್ದರು.