
ಕಲಬುರಗಿ,ಡಿ.7-ಮನೆಯ ಬೆಡ್‍ರೂಮ್‍ನಲ್ಲಿರುವ ಕಪಾಟಿನ ಬೀಗ ತೆರೆದು 84.5 ಗ್ರಾಂ.ಚಿನ್ನಾಭರಣ ಮತ್ತು 40 ಸಾವಿರ ರೂ.ನಗದು ಸೇರಿ 8.02 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ನಗರದ ಲಾಲಗೇರಿ ಕ್ರಾಸ್‍ನ ಜನತಾ ಲೇಔಟ್‍ನಲ್ಲಿ ನಡೆದಿದೆ.
ಡಾ.ಕುಮಾರ ಪ್ರಭುಲಿಂಗ ಅಂಗಡಿ ಎಂಬುವವರ ಮನೆಯ ಬೆಡ್‍ರೂಮ್‍ನಲ್ಲಿರುವ ಕಪಾಟಿನ ಬೀಗ ತೆರೆದು ನಗನಾಣ್ಯ ದೋಚಿಕೊಂಡು ಹೋಗಲಾಗಿದ್ದು, ಅವರು ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.

























