
ಮುಳಬಾಗಿಲು.ಫೆ.೯- ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣ ಅಧಿಕಾರಿಗಳ ಸೂಚನೆಯಂತೆ ಸ್ವಚ್ಛ ಶನಿವಾರವನ್ನು ತಾಲೂಕು ಪಂಚಾಯಿತಿ ಮತ್ತು ತಾಲೂಕಿನ ೩೦ ಗ್ರಾಮ ಪಂಚಾಯಿತಿಗಳ ಪಿಡಿಒ ಕಾರ್ಯದರ್ಶಿ, ಜಲಗಾರರು ಹಾಗೂ ಸ್ವಚ್ಛತಾ ಸಿಬ್ಬಂದಿ ತಾಲೂಕಿನ ಅವನಿ ಗ್ರಾಮದಲ್ಲಿ ಶ್ರಮದಾನದ ಮೂಲಕ ಆಚರಿಸಿದ್ದರು.
ತಾಲೂಕಿನ ಆವನಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಮಹಾಶಿವರಾತ್ರಿ ಹಾಗೂ ಬ್ರಹ್ಮರಥೋತ್ಸವ ಅಂಗವಾಗಿ ಗ್ರಾಮವನ್ನು ಸ್ವಚ್ಛಗೊಳಿಸಲು ೨೫೦ಕ್ಕೂ ಹೆಚ್ಚು ಸಿಬ್ಬಂದಿ ಮುಳಬಾಗಿಲು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್. ವಿ. ಬಾಬು, ನೇತೃತ್ವದಲ್ಲಿ ಆಗಮಿಸಿ ಅವನಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ದೇವಾಲಯ, ರಥಬೀದಿ, ಸೀತಾ ಪಾರ್ವತಿ ಬೆಟ್ಟದ , ಸೇರಿದಂತೆ ಅವನಿ ಗ್ರಾಮದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡರು.
ಎಲ್ಲಾ ಗ್ರಾಮ ಪಂಚಾಯತಿಗಳ ಕಸ ಸಂಗ್ರಹಿಸುವ ವಾಹನಗಳ ಮೂಲಕ ಕಸವನ್ನು ಸ್ಥಳಾಂತರ ಮಾಡಿ ಸ್ವಚ್ಛ ಆವನಿ ಗ್ರಾಮವನ್ನು ಮಾಡಲಾಗಿದ್ದು ಗ್ರಾಮಸ್ಥರು ಕನಿಷ್ಠ ಜಾತ್ರೆಯವರಿಗಾದರೂ ಸ್ವಚ್ಛತೆಗೆ ಆದ್ಯತೆ ನೀಡಿಕೊಂಡು ಬಂದರೆ ಗ್ರಾಮದ ಹಿರಿಮೆ ಇನ್ನೂ ಹೆಚ್ಚಾಗುತ್ತದೆ ಎಂಬ ವಾತಾವರಣ ಕಂಡು ಬಂದಿದೆ.
ಮಹಾಶಿವರಾತ್ರಿ ಹಬ್ಬದ ದಿಂದ ೧೦ ದಿನಗಳ ಕಾಲ ಕೋಲಾರ ಜಿಲ್ಲೆಯಲ್ಲೇ ಅತಿ ದೊಡ್ಡ ಜನ ಮತ್ತು ಜಾನುವಾರು ಜಾತ್ರೆ ನಡೆಯಲಿದ್ದು ಇದನ್ನು ಮನಗೊಂಡು ಮುಳಬಾಗಿಲು ತಾಲೂಕು ಪಂಚಾಯಿತಿ ಆವನಿ ಗ್ರಾಮದ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ಆದ್ಯತೆ ನೀಡಿದ್ದು, ಅವನಿ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ತಮ್ಮ ಇಲಾಖೆಗಳ ಸೌಲಭ್ಯಗಳನ್ನು ಅವನಿ ಜಾತ್ರೆಗೆ ನೀಡಲು ಸಿದ್ಧಗೊಂಡಿವೆ.
ಶನಿವಾರ ಸ್ವಚ್ಛತಾ ಕಾರ್ಯದ ಶ್ರಮದಾನದಲ್ಲಿ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಎನ್. ವಿ. ಬಾಬು, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ, ತಾ. ಪಂ. ಮಾಜಿ ಸದಸ್ಯ ರವಿಶಂಕರ್, ಗ್ರಾ. ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮಿಪ್ರಿಯ, ಮಾಜಿ ಸದಸ್ಯರಾದ ಶ್ರೀ ರಾಮಪ್ಪ, ತಮ್ಮಣ್ಣ ಸೇರಿದಂತೆ ಗ್ರಾಮದ ಮುಖಂಡರು , ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್. ರಮೇಶ್, ಅಶ್ವಥನಾರಾಯಣ, ವೈ. ಆರ್. ಭವಾನಿ, ನಂದೀಶ್, ವರದರಾಜ್, ತುಳಸಿರಾಮಶೆಟ್ಟಿ, ವಿಜಯಮ್ಮ, ರಾಮಣಪ್ಪ, ಚಂದ್ರ, ವಿ. ವೆಂಕಟಸ್ವಾಮಿ, ಚಂದ್ರಶೇಖರ್ ಮತ್ತಿತರ ಪಿಡಿಒಗಳು ಪಾಲ್ಗೊಂಡಿದ್ದರು.























