
ಕಲಬುರಗಿ,ಫೆ.9-ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಸಹಯೋಗದಲ್ಲಿ ರವಿವಾರ ನಗರದ ಮಾತೋಶ್ರೀ ನೀಲಗಂಗಮ್ಮಾ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಚಿತ್ರಕಲಾ ಗ್ರೇಡ್ ಪರೀಕ್ಷೆ ಕೇಂದ್ರಕ್ಕೆ ಅತಿ ಹೆಚ್ಚು ಅಂಕಗಳನ್ನು ಪಡೆದ ಮತ್ತು ಎಸ್ .ಎಸ್ ಎಲ್ ಸಿ , ಪಿಯುಸಿ ಪರಿಕೇಯಲ್ಲಿ ಅಗ್ರಶೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಯೋನಿವೃತ್ತಿ ಹೊಂದಿರುವ ಚಿತ್ರಕಲಾ ಶಿಕ್ಷಕರಿಗೆ ಗೌರವ ಸನ್ಮಾನ, ಮಕ್ಕಳ ಚಿತ್ರ ಕಲಾ ಪ್ರದರ್ಶನ, ತೊಗಲು ಗೊಂಬೆಗಳ ಸಂಪುಟ ಬಿಡುಗಡೆ, ತೊಗಲು ಗೊಂಬೆಯಾಟ ಪ್ರದರ್ಶನ ಆಯೋಜಿಸಲಾಗಿತ್ತು.
ಶಾ.ಶಿ.ಇ.ಆಯುಕ್ತರ ಕಛೇರಿ ಸಹ ನಿರ್ದೇಶಕ (ಆಡಳಿತ) ಗಣಪತಿ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳು ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲಾ ಶಿಕ್ಷಕರು ಉತ್ತಮ ರೀತಿಯಲ್ಲಿ ಭೋದಸಿದಾಗ ಇಂತಹ ಕಲಾಕೃತಿ ಬರಲು ಸಾಧ್ಯ ಇದೊಂದು ವಿಶೇಷ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಪೆÇ್ರೀತ್ಸಾಹ ನೀಡುವುದು ಸಂತಸ ತಂದಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೀತಿ ಚಂದ್ರಶೇಖರ ಮುಖ್ಯ ಅತಿಥಿಯಾಗಿ ಮಾತನಾಡಿ ಮಕಳ ಚಿತ್ರ ಕಲಾ ಪ್ರದರ್ಶನವನ್ನು ವಿಕ್ಷೀಸಿ ತೊಗಲು ಗೊಂಬೆಯಾಟ ನೋಡಿ ಹಿಂದಿನ ನೆನಪುಗಳು ಮರುಕಳಿಸುತ್ತವೆ ನನಗೆ ಚಿತ್ರಕಲೆ ಆಸಕ್ತಿ ಆದರೆ ಎಲ್ಲರಿಗೂ ಚಿತ್ರಬಿಡಿಸುವುದು ಅಸಾಧ್ಯ ಪ್ರೌಢಶಾಲಾ ಮಕ್ಕಳು ಅದ್ಬುತ ಚಿತ್ರಕಲೆ ನೋಡಿದರೆ ಒಂದು ಉನ್ನತ ಮಟ್ಟಕ್ಕೆ ಹೋಗುವ ಸಂಕೇತ ಎಂದು ಹೇಳಿದರು. ನಮ್ಮ ಸಮಾಜ ಕಲ್ಯಾಣ ಇಲಾಖೆಯಲ್ಲಿ ಚಿತ್ರಕಲಾ ಶಿಕ್ಷಕರ ಜೊತೆಗೆ ಹೆಚ್ಚಿನ ಒಡನಾಟ ಏಕೆಂದರೆ ನಿರ್ಜೀವ ವಸ್ತುಗಳಿಗೆ ಜೀವ ತುಂಬುವ ಶಕ್ತಿ ಅವರಿಗಿರುತ್ತದೆ ನಾವು ಲಕ್ಷಾಂತರ ರೂ ಖರ್ಚ ಕಟ್ಟಡ ಕಟ್ಟಿದರು ಮಾತಾನಾಡುವುದಲ್ಲ ಚಿತ್ರಕಲಾ ಶಿಕ್ಷಕರು ಸುಂದರವಾದ ಚಿತ್ರಕಲೆ ರಚಿಸಿ ಗೋಡೆಗಳು ಮಾತಾನಾಡುವ ಹಾಗೆ ಮಾಡುತ್ತಾರೆ. ಎಂದು ನುಡಿದರು.
ಮಕ್ಕಳು ತಮ್ಮ ಚಿತ್ರ ಕಲೆಯಲ್ಲಿ ಆಸಕ್ತಿ ಮತ್ತು ಸೃಜನಶೀಲ ಕಲೆ ಬಣ್ಣ ಗಳ ಸಂಯೋಜನೆ ತುಂಬಾ ಅರ್ಥಪೂರ್ಣ ಚಿತ್ರಿಸಿದ್ದಾರೆ. ಚಿತ್ರ ಕಲೆಯಲ್ಲಿ ಸಾಧನೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಿಂದ ಪೆÇ್ರೀತ್ಸಾಹ ನೀಡುವ ಕಾರ್ಯ ಶ್ಲಾಘನೀಯ. ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಶಿವಾನಂದ ಕೊಪ್ಪದ, ಧರ್ಮಾನಂದ, ಎಂ.ಕೆ, ರಾಜೇಶ ನೀಲಹಳ್ಳಿ , ಸಹ ಶಿಕ್ಷಕ ಹಾಗೂ ಸಾಹಿತಿ ರಾಜೇಂದ್ರ ಝಳಕಿ ಅತಿಥಿಗಳಾಗಿ ಆಗಮಿಸಿದ್ದರು.
.ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಅಧ್ಯಕ್ಷ ಶಾಂತಮಲ್ಲ ಶಿವಬೊ ಅಧ್ಯಕ್ಷತೆವಹಿಸಿ ಚಿತ್ರಕಲಾ ವಿಶೇಷ ವ್ಯಕ್ತಿತ್ವ ಹೊಂದಿದೆ ಕೇವಲ ಅಂಕಗಳಿಸುವುದಕ್ಕೆ ಮೀಸಲಾಗಿಲ್ಲ. ಪ್ರಾಥಮಿಕದಿಂದ ಉನ್ನತ ಶಿಕ್ಷಣದಲ್ಲಿ ಕಲೆ ಪೂರವಾಗಿದೆ ಎಂದರು ಚಿತ್ರಕಲಾ ಶಿಕ್ಷಕರಿಗೂ ಇಲಾಖೆ ಅವರು ಬಳಸಿಕೊಳ್ಳುತ್ತಾರೆ. ಇಲಾಖೆ ದೈಹಿಕ ಶಿಕ್ಷಣ ಆದ್ಯತೆ ಹಾಗೆ ಚಿತ್ರಕಲಾ ಶಿಕ್ಷಕರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ವಯೋನಿವೃತ್ತಿ ಹೊಂದಿರುವ ಚಿತ್ರಕಲಾ ಶಿಕ್ಷಕ ಬಾಬಾಸಾಹೇಬ ವಸಂತ ಸಾಳುಂಕೆ, ಎಸ್. ವಿ. ವಿಜಯಭಾರತಿ, ಮಹಮ್ಮದ್ ಗೌಸ್ ಪಟೇಲ್ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಹಾಗೂ ಚಿತ್ರಕಲೆಯ ಲೋವರ್ ಗ್ರೇಡ್, ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದವರಿಗೆ, ಚಿತ್ರಕಲಾ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸಂಘದ ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಶಾಲೆ ಚಿತ್ರಕಲಾ ಶಿಕ್ಷಕರು ಮಕ್ಕಳು ಪೆÇೀಷಕರು ಭಾಗವಹಿಸಿದ್ದರು.
ವಾರ್ಷಿಕ ಮಹಾಸಭೆ ಮತ್ತು ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ನಿವೃತ್ತ ಚಿತ್ರಕಲಾ ಪರೀವೀಕ್ಷಕರು ಆಗಮಿಸಿ ಚಿತ್ರಕಲಾ ಸಂಘ ಇಲಾಖೆ ಕಾರ್ಯ ಶ್ಲಾಘನೀಯ ಎಂದರು.
ಚಿತ್ರಕಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ವಿವಿಧ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು.ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೋರಳ್ಳಿ ಹಾಗೂ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಜಗದೀಶ ಪಾಟೀಲ ಅವರು ತಿಳಿಸಿದ್ದಾರೆ





















