ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ


ನವಲಗುಂದ,ಜ.೧೮: ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ, ಈ ಕಾಯ್ದೆಯ ಪ್ರಕಾರ, ಹೆಣ್ಣುಮಕ್ಕಳಿಗೆ ಕನಿಷ್ಠ ೧೮ ವರ್ಷ ಮತ್ತು ಗಂಡು ಮಕ್ಕಳಿಗೆ ೨೧ ವರ್ಷ ಪೂರ್ಣಗೊಳ್ಳುವ ಮೊದಲು ಮದುವೆ ಮಾಡುವುದು ಕಾನೂನುಬಾಹಿರವಾಗಿದೆ ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ಕರೆಪ್ಪ ಕೌಜಲಗಿ ಅಭಿಪ್ರಾಯ ವ್ಯಕ್ತಪಡಿಸಿದರು..


ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ-೩ ರಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಹಾಗೂ ಭೇಟಿ ಭಚಾವೋ ಭೇಟಿ ಪಡಾವೋ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಬಾಲ್ಯ ವಿವಾಹದಲ್ಲಿ ಭಾಗವಹಿಸುವವರು, ಮಾಡುವವರು ಅಥವಾ ಪ್ರೋತ್ಸಾಹಿಸುವವರು ೨ ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ದಂಡ ಅಥವಾ ಎರಡಕ್ಕೂ ಗುರಿಯಾಗುತ್ತಾರೆ, ಬಾಲ್ಯ ವಿವಾಹ ತಪ್ಪಿಸಲು ಮಕ್ಕಳ ಸಹಾಯವಾಣಿ ೧೦೯೮ಕ್ಕೇ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು..


ಎಸ್.ಡಿ.ಎA.ಸಿ ಸದಸ್ಯ ಮಾಬುಸಾಬ ಯರಗುಪ್ಪಿ ಮಾತನಾಡಿ ಹದಿನೆಂಟು ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಶೋಷಣೆಯಿಂದ ರಕ್ಷಿಸಲು ಸರ್ಕಾರ ಪೋಕ್ಸೋದಂತಹ ಕಾನೂನು ಜಾರಿಗೆ ತಂದಿದ್ದು, ಅದು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತದೆ ಮತ್ತು ಮಕ್ಕಳಿಗೆ ಸ್ನೇಹಪರವಾದ ವಾತಾವರಣವನ್ನು ಒದಗಿಸುತ್ತದೆ, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಶಿಕ್ಷಣ, ಜಾಗೃತಿ, ಕೌಶಲ್ಯ ತರಬೇತಿ ಮತ್ತು ಕಾನೂನಿನ ಅರಿವು ಅತ್ಯಗತ್ಯ, ಹೆಣ್ಣು ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.


ಭಾರತಿ ಬಂಡಿ, ನಾಗರತ್ನ ಯಲುವಿಗಿ, ಕಾಶೀಮಸಾಬ ಮಚಲಿಬಂದರ, ಮಹಮ್ಮದಲಿ ಮಿರ್ಜಿ, ಸಹ ಶಿಕ್ಷಕಿಯರಾದ ಎಂ. ಸಿ ಚನ್ನಪ್ಪಗೌಡ್ರ, ಕೆ.ಎಪ್. ಬಂತಿ, ಎಂ. ಎನ್ ವಗ್ಗರ, ಸವಿತಾ ಸರನಾಡಗೌಡ್ರ, ಕಾವೇರಿ ಗುಡಿಸಾಗರ ಭಾರತಿ ಹಳೆಮನಿ, ಸೂರತ ಬಾಗಲಕೋಟಿ, ಶಾಂತಾ ಹಂಚಿನಾಳ, ಪಾರ್ವತಿ ಭರಮಗೌಡ್ರ, ನಿರ್ಮಲಾ ನಡುವಿನಮನಿ, ಗಿರಿಜಾ ಹುಲ್ಲೂರ, ಗಂಗವ್ವ ಹುಣಸಿಮರದ, ಇಂದಿರಾ ಮಲ್ಲಾಪುರ, ಶಂಕ್ರಮ್ಮ ಹುಡೇದಮನಿ, ಸರಸ್ವತಿ ಮಸಾಲಜಿ, ಶಾಂತಾ ಜಾವೂರ, ಜರಿನಾ ಬಾಗಲಕೋಟ, ರೇಣುಕಾ ಸಮ್ಮನವರ, ದೇವಕ್ಕ ಮುರಡಿ ಇನ್ನಿತರರು ಉಪಸ್ಥಿತರಿದ್ದರು..