Home ಜಿಲ್ಲೆ ಕಲಬುರಗಿ ಇಂಚಗೇರಿಮಠದಲ್ಲಿ ವಿಜೃಂಭಣೆಯಿಂದ ಮಂಗಲಗೊಂಡ ಚೈತ್ರ ಸಪ್ತಾಹ

ಇಂಚಗೇರಿಮಠದಲ್ಲಿ ವಿಜೃಂಭಣೆಯಿಂದ ಮಂಗಲಗೊಂಡ ಚೈತ್ರ ಸಪ್ತಾಹ

ಕಲಬುರಗಿ,ಮಾ.31-ಚಡಚಣ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿಮಠದಲ್ಲಿ ಮಾ.23 ರಂದು ಪ್ರಾರಂಭವಾದ ಶ್ರೀ ಸಮರ್ಥ ಸದ್ಗುರು ಗುರುಲಿಂಗ ಜಂಗಮ ಮಹಾರಾಜರ ಹಾಗೂ ಶ್ರೀ ಸಮರ್ಥ ಸದ್ಗುರು ಶಿವಪ್ರಭು ಮಹಾರಾಜರ ಪುಣ್ಯ ಸ್ಮರಣೋತ್ಸವದ ಚೈತ್ರ ಸಪ್ತಾಹ ಇಂದು ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದದ ವಿಮಲಬ್ರಹ್ಮ ನಿರೂಪಣೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ಪೂಜ್ಯ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಮಂಗಲಗೊಂಡಿತು.
ಈ ಆಧ್ಯಾತ್ಮ ಸಪ್ತಾಹದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.