ಮೆಟ್ರೋ ಕೆಂಪು ಮಾರ್ಗಕ್ಕೆ ಕೇಂದ್ರದ ಬ್ರೇಕ್

ಬೆಂಗಳೂರು, ಫೆ. ೧೨-ಸಿಲಿಕಾನ್ ಸಿಟಿಯ ಜೀವನಾಡಿ ಅಂತ ಕರೆಸಿಕೊಳ್ಳುವ ನಮ್ಮ ಮೆಟ್ರೋ ಈಗಾಗಲೇ ಜನರ ಮೆಚ್ಚಿನ ಸಂಚಾರಿ ಮೆಟ್ರೋ ಎನ್ನಿಸಿಕೊಂಡಿದೆ.

ಈ ನಡುವೆ ಹೆಬ್ಬಾಳ ಟೂ ಸರ್ಜಾಪುರ ನಡುವಿನ ರೆಡ್ ಲೈನ್ ಮೆಟ್ರೋ ಕಾಮಗಾರಿ ಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿರುವಾಗ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ..


ಮೆಟ್ರೋ ದರ ಜಟಾಪಟಿ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಯೋಜನೆ ಗೆ ಬ್ರೇಕ್ ಹಾಕಿರೋದು ರಾಜ್ಯ ಸರ್ಕಾರಕ್ಕೆ ನುಂಗಲಾಗದ ತುತ್ತಾಗಿದೆ..ಈಗಾಗಲೇ ರೆಡ್ ಲೈನ್ ಗೆ ಡಿಪಿಆರ್ ಸಿದ್ಧ ಮಾಡಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು.ಸರ್ಜಾಪುರ ಟೂ ಹೆಬ್ಬಾಳ ನಡುವಿನ ಸುಮಾರು ೩೭ ಕಿ.ಮೀಟರ್ ಉದ್ದದ.೨೮ ಮೆಟ್ರೋ ಸ್ಟೇಷನ್ ಗಳು ಒಳಗೊಂಡ.

‘ಸುಮಾರು ೨೮.೪೦೫ ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್ ಯೋಜನೆಗೆ ಡಿಪಿಅರ್ ಅನುಮೋದನೆಗೆ ಕಳುಹಿಸಲಾಗಿತ್ತು. ಅದರೆ ಡಬಲ್ ಡೆಕ್ಕರ್ ಮಾಡೋದ್ರಿಂದ ನಮ್ಮ ಮೆಟ್ರೋದಲ್ಲಿ ಪಯಾಣ ಮಾಡುವರ ಸಂಖ್ಯೆ ಕಡಿಮೆ ಅಗುತ್ತದೆ..

ಹಾಗಾಗಿ ರೆಡ್ ಲೈನ್ ಮೆಟ್ರೋ ಕಾರಿಡಾರ್ ನಲ್ಲಿ ಡಬಲ್ ಡೆಕ್ಕರ್ ಬೇಡ ಅಂತ ಕೇಂದ್ರ ಸರ್ಕಾರ ರೆಡ್ ಲೈನ್ ಮೆಟ್ರೋ ಕಾಮಗಾರಿ ಗೆ ಒಪ್ಪಿಗೆ ನೀಡಿಲ್ಲ ಅಂತ ಸಂಸದ ಪಿ.ಸಿ ಮೋಹನ್ ಟ್ವೀಟ್ ಮೂಲಕ ಮಾಹಿತಿ ನೀಡಿದರೆ..