
ಸಂಜೆ ವಾಣಿ ವಾರ್ತೆ,
ಜಮಖಂಡಿ :ಎ.೧:ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ರಾಜ್ಯ ಸರ್ಕಾರದ ಅನುಮತಿಯಂತೆ ಜನಗಣತಿ ೨೦೨೭ರ ಅಂಗವಾಗಿ ಸ್ವಯಂ ಗಣನೆ (Seಟಜಿ ಇಟಿumeಡಿಚಿಣioಟಿ) ಪ್ರಕ್ರಿಯೆಯನ್ನು ೨೦೨೬ರ ಏಪ್ರಿಲ್ ೧ರಿಂದ ಏಪ್ರಿಲ್ ೧೫ರವರೆಗೆ ನಡೆಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.
ನಗರದ ತಾಲೂಕು ಆಡಳಿತ ಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಸಾರ್ವಜನಿಕರು ಸರ್ಕಾರದ ಅಂತರ್ಜಾಲದ ಮೂಲಕ ತಮ್ಮ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಸ್ವಯಂವಾಗಿ ನಮೂದಿಸಬಹುದು ಎಂದರು.
ಪ್ರತಿ ಕುಟುಂಬವು ತಮ್ಮ ಮನೆಯ ವಿವರಗಳನ್ನು ನಿಖರವಾಗಿ ಮತ್ತು ಸಂಪೂರ್ಣವಾಗಿ ಸಲ್ಲಿಸುವುದು ಅಗತ್ಯವಾಗಿದೆ. ಈ ಪ್ರಕ್ರಿಯೆಯ ಮೂಲಕ ಸಂಗ್ರಹವಾಗುವ ಮಾಹಿತಿಯು ಪಾರದರ್ಶಕ, ಸರಿಯಾದ ಹಾಗೂ ಸಮಯೋಚಿತವಾಗಿದ್ದು, ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮಹತ್ವದ ಆಧಾರವಾಗಲಿದೆ ಎಂದು ತಿಳಿಸಿದರು.
ಇದು ಮಹತ್ವದ ರಾಷ್ಟ್ರೀಯ ಕಾರ್ಯವಾಗಿರುವುದರಿಂದ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಆದ್ದರಿಂದ ಎಲ್ಲಾ ಕುಟುಂಬಗಳು ನಿಗದಿತ ಅವಧಿಯೊಳಗೆ hಣಣಠಿs://se.ಛಿeಟಿsus.gov.iಟಿ?? ಈ ಲಿಂಕ್ ಬಳಸಿ ಸ್ವಯಂ ಗಣನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.
ಇನ್ನು ಏಪ್ರಿಲ್ ೧೫ರಿಂದ ಮೇ ೧೬ರವರೆಗೆ ಗಣತಿದಾರರು ಮನೆಗೆ ಭೇಟಿ ನೀಡುವ ವೇಳೆ, ನೀವು ಅಂತರ್ಜಾಲದಲ್ಲಿ ನಮೂದಿಸಿದ ಮಾಹಿತಿಯ Sಇ Iಆ ಅನ್ನು ನೀಡಬೇಕು. ಈ ಐಡಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
























