
ಕಲಬುರಗಿ,ಏ.13-ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ನಗರದ ಪೊಲೀಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲಾಪುರದ ಶಿವಶರಣಪ್ಪ ಬಂಡಪ್ಪ ಬೇನೂರ, ಫಾರುಕ್ ಅದಮಸಾಬ ಖುರೇಷಿ, ಕುರಿಕೋಟಾದ ರಬ್ಬಾನಿ ಅಲ್ಲಾವುದ್ದೀನ್ ಅತ್ತರ್ ಎಂಬುವವರನ್ನು ಬಂಧಿಸಿ ಜಾನುವಾರು ಕಳ್ಳತನ ಮಾಡಿ ಮಾರಾಟ ಮಾಡಿದ 2.15 ಲಕ್ಷ ನಗದು, ಜಾನುವಾರು ಸಾಗಿಸಲು ಬಳಸುತ್ತಿದ್ದ 2 ಲಕ್ಷ ರೂ.ಮೌಲ್ಯದ ಗೂಡ್ಸ್ ವಾಹನ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಆಳಂದ ಡಿಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಜಗದೀಶ ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.


















