
ಕಲಬುರಗಿ,ಆ.26: ಇಲ್ಲಿನ ಅಶೋಕ ನಗರ ಪೆÇಲೀಸ್ ಠಾಣೆಯ ವ್ಯಾಪ್ತಿಯ ಪಾರ್ವತಿ ಲೇಔಟ್ ಪ್ರದೇಶದ ಮನೆಯೊಂದರಲ್ಲಿ ಕಳ್ಳತನ ನಡೆದಿದೆ.
ಪಾರ್ವತಿ ಲೇಔಟ್ ನ ನಿವಾಸಿ ಶರಣಬಸಪ್ಪ ಶಂಕ್ರಪ್ಪ ಚೌಧರಿ ಎಂಬಾತರ ಮನೆಯಲ್ಲೇ ಕಳ್ಳತನವಾಗಿದ್ದು,43 ಗ್ರಾಂ. ಬಂಗಾರದ ಆಭರಣಗಳು, 150 ಗ್ರಾಂಬೆಳ್ಳಿ ಹಾಗೂ 1 ಲಕ್ಷ ರೂಪಾಯಿ ನಗದು ಹಣ ಕಳ್ಳತನವಾಗಿದೆ.
ಶನಿವಾರ ತಡರಾತ್ರಿ ವೇಳೆಗೆ ಕಳ್ಳರು ಮನೆಯ ಬಾಗಿಲಿನ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ಮನೆಯ ಅಲಮಾರಿನಲ್ಲಿಟ್ಟಿದ್ದ 1 ಲಕ್ಷ ರೂ. ನಗದು, 15 ಗ್ರಾಂನ ಬಂಗಾರದ ಲಾಕೆಟ್, 5 ಗ್ರಾಂನ 3 ಸುತ್ತುಂಗುರಗಳು, 5 ಗ್ರಾಂನ ಒಂದು ಜೊತೆ ಕಿವಿಯೊಲೆ, 3 ಗ್ರಾಂನ ಉಂಗುರ, 5 ಗ್ರಾಂನ ನಾಣ್ಯ ಸೇರಿದಂತೆ 150 ಗ್ರಾಂ. ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಕಳ್ಳತನಕ್ಕೆ ಕಸರತ್ತು ನಡೆಸುತ್ತಿರುವ ಸಿಸಿ ಕ್ಯಾಮೆರಾದ ದೃಶ್ಯಾವಳಿ ವೈರಲ್ ಆಗುತ್ತಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಶೋಕ್ ನಗರ ಪೆÇಲೀಸರು, ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.