ಮಾನಸಿಕ ಅಸ್ಪøಶ್ಯತೆ ನಿವಾರಿಸಲು ಕರೆ

ಕಲಬುರಗಿ,ಫೆ.22-ಸಮಾಜದಲ್ಲಿ ಬೇರೂರಿದ ಅಸ್ಪೃಶ್ಯತೆ ತೊಲಗಿಸಬೇಕಾದರೆ, ನಮ್ಮ ಮಾನಸಿಕ ಅಸ್ಪೃಶ್ಯತೆ ಮೊದಲು ಅಳಿಸಬೇಕಾಗಿದೆ ಎಂದು ಪಿಎಸ್‍ಐ ಸುಖಾನಂದ ಸಿಂಗೆ ಕರೆ ನೀಡಿದರು.
ತಾಲೂಕಿನ ಕಮಲಾಪೂರ ಗ್ರಾಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜ್ಞಾನ ಸಾಗರ ಶಿಕ್ಷಣ ಮತ್ತು ಸಾಂಸ್ಕøತಿಕ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಅಸ್ಪೃಶ್ಯತಾ ನಿವಾರಣೆಯ ಜಾಗೃತಿ ಕಾರ್ಯಕ್ರಮ ವಿಚಾರ ಸಂಕಿರಣ, ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ಕೊಡಿಸಬೇಕು.ಆ ಮೂಲಕ ಅಸ್ಪೃಶ್ಯತೆ ಹಾಗೂ ಜಾತಿಯ ಅಸಮಾನತೆಯ ಅರಿವು ಮೂಡಿಸಬೇಕು. ಆಗ ಮಾತ್ರ ಅಸ್ಪೃಶ್ಯತೆ ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ಅವರು ಮಾತನಾಡಿ, ವರ್ಗರಹಿತ ಮತ್ತು ಜಾತಿ ರಹಿತ ಸಮಾಜ ನಿರ್ಮಿಸಲು ಬುದ್ಧ, ಬಸವ ಡಾ.ಅಂಬೇಡ್ಕರವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇವರು ಮಹಿಳಾ ಸಮಾನತೆಗಾಗಿ ಅಧಿಕಾರ ತ್ಯಾಗ ಮಾಡಿದ ಜಗತ್ತಿನ ಮಹಾ ಮಾನವತಾವಾದಿಗಳು ಎಂದು ತಿಳಿಸಿದರು.
ಪತ್ರಕರ್ತ ವಿಠ್ಠಲ ಚಿಕಣಿ ಅವರು, ಶಿಕ್ಷಣದ ಅರಿವಿನಿಂದ ಸಾಮಾಜಿಕ ಸಮಸ್ಯೆ ಹಾಗೂ ಅನಿಷ್ಟಗಳನ್ನು ಅಳಿಸ ಹಾಕಬೇಕಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಪೀರಪ್ಪ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು.
ಕಮಲಾಪೂರ ಉಪ ತಹಸೀಲ್ದಾರ ದೀಪಕ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಮುಖಂಡರಾದ ತಿಪ್ಪಾರೆಡ್ಡಿ,ಅಶೋಕ ಗೌರ, ಅಮೃತ ಗೌರೆ, ವೀರಣ್ಣ ಬೆಣ್ಣೆಶಿರೂರ,ಗುರುರಾಜ ಮಾಟೂರ,ಸಂತೋಷ ರಾಂಪೂರೆ, ರಮೇಶ ಬೆಳಕೋಟ, ಶರಣು ಗೌರ, ಮೈಲಾರಿ ಗೊಬ್ಬುರ ಮತ್ತಿತರ ಗಣ್ಯರು ಪಾಲ್ಗೊಂಡಿದರು. ರವೀಂದ್ರ ಬಿ.ಕೆ ನಿರೂಪಿಸಿದರು.
ನಂತರ ಅಷ್ಟಗಾ ಗ್ರಾಮದ ಲೋಹಿಯಾ ಕಲಾ ತಂಡದವರಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.