
ದಾವಣಗೆರೆ, ಏ. ೬- ರಾಜ್ಯದಲ್ಲಿ ಈಗ ಎದುರಾಗಿರುವ ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಲಿದೆ. ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆಸ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತ, ಖಚಿತ, ನಿಶ್ಚಿತ ಎಂದಿತ್ತು. ಈಗ ಆ ಮಾತು ಬದಲಾಗಿ ಕಾಂಗ್ರಸ್ ಪಕ್ಷಕ್ಕೆ ಚುನಾವಣೆ ಖಚಿತ ಸೋಲು ನಿಶ್ಚಿತ ಎಂದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸಿಎಂ ಮತದಾರರಿಗೆ ದಾವಣಗೆರೆಯಲ್ಲಿ ಅಹಿಂದಕ್ಕೆ ಓಟು ಹಾಕಬೇಡಿ ಎನ್ನುತ್ತಾರೆ. ಬಾಗಲಕೋಟೆಯಲ್ಲಿ ಅಹಿಂದಕ್ಕೆ ಓಟು ಹಾಕಿ ಎನ್ನುತ್ತಿದ್ದಾರೆ. ಇವರ ಗೊಂದಲದ ಹೇಳಿಕೆಗಳನ್ನು ಜನರು ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಇದಲ್ಲದೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಬ್ಬ ಮತದಾರ ರಿಗೆ ಅದರಲ್ಲೂ ಹಿಂದೂಗಳಿಗೆ ೭ಸಾವಿರ, ಮುಸಲ್ಮಾನರಿಗೆ ೧೦ ಸಾವಿರ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಹೇಳುವುದಾದರೆ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸಂಪತ್ತಿಗೆ ಸವಾಲ್ ಹಾಡಿದ್ದಾರೆ. ನಿಮ್ಮ ಸಂಪತ್ತು ಕೆಲಸ ಮಾಡಲ್ಲ. ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಎಲ್ಲಾ ವರ್ಗದ ಓಟುಗಳು ನಮಗೆ ಸಿಗಲಿವೆ. ಉತ್ತಮ ನಡೆತೆ ಇರುವ ಬಿಜೆಪಿ ಅಭ್ಯರ್ಥಿಗಳು ಎರಡೂ ಕಡೆ ಗೆಲ್ಲಲಿದ್ದಾರೆ ಎಂದು ತಿಳಿಸಿದರು.
ಏಪ್ರಿಲ್ ೭ರಂದು ಅಂದರೆ ನಾಳೆ ಸಂಜೆ ೫ಕ್ಕೆ ಸಿಎಂ ಸೇರಿದಂತೆ ಎಲ್ಲರೂ ದಾವಣಗೆರೆ ಕ್ಷೇತ್ರವನ್ನು ಬಿಡಬೇಕು. ನಾವುಗಳು ಸಹ ಕ್ಷೇತ್ರವನ್ನು ಬಿಡಬೇಕು. ನಾನು ಇಲ್ಲಿ ಹೇಳುವುದೇನೆಂದರೆ ಚುನಾವಣೆ ಮುಗಿದ ನಂತರ ಸಿದ್ದರಾಮಯ್ಯ ಅವರು ದಾವಣಗೆರೆಗೆ ಮುಖ್ಯ ಮಂತ್ರಿಯಾಗಿ ಮತ್ತೆ ಬರುವುದಿಲ್ಲ ಎಂದು ಹೇಳಿದರು.
ಜಮೀರ್ ಅಹಮದ್ ಒಲ್ಲದ ಮನಸ್ಸಿನಿಂದ ದಾವಣಗೆರೆಗೆ ಬಂದು ಹೋಗಿದ್ದಾರೆ. ಓಟು ಕೇಳಲು ಕಬಾಬ್ ತಿನ್ನುಸುತ್ತಿದ್ದೀರಿ. ಇದು ಕಾಂಗ್ರೆಸ್ ಸಂಸ್ಕೃತಿನಾ ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ವಿಚಾರದಲ್ಲಿ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದ್ದಾರೆ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ ಅವರ ತೀರ್ಮಾನವೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ವಿಪ ಸದಸ್ಯ ಕೆ.ಎಸ್.ನವೀನ, ಲೋಕಿಕೆರೆ ನಾಗರಾಜ್, ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಬಿ.ಎಂ.ಸತೀಶ್ ಕೊಳೇನಹಳ್ಳಿ, ಬಾತಿ ವೀರೇಶ್ ಇತರರು ಇದ್ದರು.























