ಬಸ್-ಜೀಪ್ ಮಧ್ಯೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಕಲಬುರಗಿ,ಡಿ.12: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಜೀಪ್ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ವಯೋವೃದ್ಧರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಅಫಜಲಪುರ ರಸ್ತೆಯ ಹಾರುತಿಹಡಗಿಲ್ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದ ಅಫಜಲಪುರ ತಾಲೂಕಿನ ತೆಲ್ಲುಣಗಿ ಗ್ರಾಮದ ಚಂದ್ರಕಾಂತ ಶಿವರಾಯ (80) ಹಾಗೂ ಅವರ ಪತ್ನಿ ಸುಲೋಚನಾ ಚಂದ್ರಕಾಂತ (70) ಮತ್ತು ಮಿಟ್ಟುಸಾಬ್ ಪಟೇಲ್ ಸಾವನ್ನಪ್ಪಿವರು. ಇದೇ ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಶೈಲ ಭೂತಾಳೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಮಧ್ಯೆ ಬಸ್ ನಲ್ಲಿದ್ದ ಘತ್ತರಗಾ ಗ್ರಾಮದ ವಿಜಯಲಕ್ಷ್ಮಿ ಹಾಗೂ ಬಂದರವಾಡದ ಗುರುದೇವಿ ಸಹ ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಅಫಜಲಪುರ ಕಡೆಯಿಂದ ಕಲಬುರಗಿ ಕಡೆಗೆ ಹೊರಟಿದ್ದ ಜೀಪ್ ಎದುರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಅಪಘಾತಕ್ಕೆ ಒಳಗಾದ ಬಸ್ಸಿಗೆ ಹಿಂಬದಿಯಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜೀಪ್ ನುಜ್ಜುಗುಜ್ಜಾಗಿದೆ.
ಕಲಬುರಗಿ ಪೆÇಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ , ಸಂಚಾರ ವಿಭಾಗದ ಎಸಿಪಿ ಸುಧಾ ಆದಿ, ಸಂಚಾರ ಪೆÇಲೀಸ್ ಠಾಣೆ-1ರ ಇನ್ಸ್ ಪೆಕ್ಟರ್ ಶಕೀಲ್ ಅಂಗಡಿ ಹಾಗೂ ಇತರ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡಿದ್ದಾರೆ.
ಸಂಚಾರ ಪೆÇಲೀಸ್ ಠಾಣೆ-1ರಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.