Home ಮುಖಪುಟ ಸುದ್ದಿ ಇರಾನ್ ಮೇಲೆ ‘ಬಂಕರ್ ಬಸ್ಟರ್’ ಬಾಂಬ್

ಇರಾನ್ ಮೇಲೆ ‘ಬಂಕರ್ ಬಸ್ಟರ್’ ಬಾಂಬ್

ಟೆಹ್ರಾನ್/ವಾಷಿಂಗ್ಟನ್,ಮಾ. ೩೧-ಇರಾನ್ ವಿರುದ್ಧ ಅಮೆರಿಕ,ಇಸ್ರೇಲ್ ತನ್ನ ಪ್ರತೀಕಾರ ಮುಂದುವರಿಸಿದ್ದು,ಇರಾನ್‌ನ ಇಸ್ಪಹಾನ್ ನಗರದಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ ಸುಮಾರು ೯೦೭ ಕೆಜಿ ಬಂಕರ್ ಬಸ್ಟರ್ ಬಾಂಬ್‌ಗಳಿಂದದಾಳಿ ನಡೆಸಿದೆ. ಈ ಸ್ಫೋಟ ಕುರಿತಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವೀಡಿಯೊವೊಂದನ್ನ ಹಂಚಿಕೊಂಡಿದ್ದಾರೆ.

ವರದಿಗಳ ಮಾಹಿತಿಯನ್ವಯ ಪ್ರಕಾರ, ಇಂದು ಮುಂಜಾನೆ ಇಸ್ಫಹಾನ್ ನಗರದಲ್ಲಿ ‘ಬಂಕರ್ ಬಸ್ಟರ್’ ಬಾಂಬ್ ಈ ಸ್ಫೋಟ ಸಂಭವಿಸಿದೆ.
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿ ಮುಂದುವರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಹಂಚಿಕೊಂಡ ವಿಡಿಯೋ ಒಂದು ಇರಾನ್‌ನ ಇಸ್ಫಹಾನ್ ನಗರದಲ್ಲಿ ಭಾರೀ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಈ ದಾಳಿ ಅಮೆರಿಕ ಹಾಗೂ ಇಸ್ರೇಲ್ ಸಂಯುಕ್ತ ಕಾರ್ಯಾಚರಣೆಯ ಭಾಗವಾಗಿರಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಳಿವೆ.


ಈ ದಾಳಿಯಲ್ಲಿ ಸುಮಾರು ೯೦೦ ಕೆಜಿ ತೂಕದ ‘ಬಂಕರ್ ಬಸ್ಟರ್’ ಬಾಂಬ್‌ಗಳನ್ನು ಬಳಸಿ, ಇಸ್ಫಹಾನ್‌ನ ಪ್ರಮುಖ ಗೊಳಾಯುಧ ಸಂಗ್ರಹಣಾ ಕೇಂದ್ರವನ್ನು ಗುರಿಯಾಗಿಸಲಾಗಿದೆ ಎಂದು ಸುದ್ದಿಸಂಸ್ತೆಯೊಂದರ ವರದಿ ಉಲ್ಲೇಖಿಸಿ ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ನಂತರ ಅನೇಕ ದ್ವಿತೀಯ ಸ್ಫೋಟಗಳು ಸಂಭವಿಸಿ, ಆಕಾಶವನ್ನೇ ಆವರಿಸುವ ಅಗ್ನಿಜ್ವಾಲೆಗಳು ಕಾಣಿಸಿಕೊಂಡವು ಎಂದು ಹೇಳಲಾಗಿದೆ.


ಇಸ್ಫಹಾನ್ ನಗರವು ಸುಮಾರು ೨೩ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಬದ್ರ್ ಸೇನಾ ವಿಮಾನ ನೆಲೆ ಹೊಂದಿರುವ ಪ್ರಮುಖ ಕೇಂದ್ರವಾಗಿದೆ. ಈ ಪ್ರದೇಶವನ್ನು ಹಿಂದೆಯೂ ಆಪರೇಷನ್ ಮೆಡ್ ನೈಟ್ ಹ್ಯಾಮರ್ ವೇಳೆ ಗುರಿಯಾಗಿಸಲಾಗಿತ್ತು.


ಅಮೆರಿಕ ಮತ್ತು ಇಸ್ರೇಲ್ ಸರ್ಕಾರಗಳು ಇರಾನ್ ಅಣ್ವಸ್ತ್ರ ನಿರ್ಮಾಣದ ಹಂತದಲ್ಲಿದೆ ಎಂದು ಆರೋಪಿಸುತ್ತಿದ್ದರೂ, ಇಂಟರ್ ನ್ಯಾಷನಲ್ ಆಟೋಮಿಕ್ ಎನರ್ಜಿ ಏಜೆನ್ಸಿ ಈ ಆರೋಪವನ್ನು ಬೆಂಬಲಿಸುವ ಸಾಕ್ಷ್ಯ ಇಲ್ಲ ಎಂದು ಹೇಳಿದೆ.


ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಸುಮಾರು ೫೪೦ ಕೆಜಿ ಅತಿ ಶುದ್ಧೀಕರಿಸಿದ ಯುರೇನಿಯಂ ಸಂಗ್ರಹವನ್ನು ಇಸ್ಫಹಾನ್‌ನ ಭೂಗರ್ಭ ಕೇಂದ್ರಗಳಿಗೆ ಸ್ಥಳಾಂತರಿಸಿರಬಹುದು ಎಂಬ ಮಾಹಿತಿ ಹೊರಬಂದಿದೆ.


ದಾಳಿಯ ಮುನ್ನವೇ ಅಧ್ಯಕ್ಷ ಟ್ರಂಪ್ ಇರಾನ್ ತನ್ನ ಶಕ್ತಿ ಸಂಪನ್ಮೂಲಗಳು ಹಾಗೂ ಮೂಲಸೌಕರ್ಯಗಳ ಮೇಲೆ ಭಾರೀ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಒತ್ತಾಯಿಸಿದ್ದ ಅವರು, ಒಪ್ಪಂದವಾಗದಿದ್ದರೆ ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆಯನ್ನು ಸೂಚಿಸಿದ್ದರು.
‘ಬಂಕರ್ ಬಸ್ಟರ್’ ಎಂದರೆ ಏನು?
‘ಬಂಕರ್ ಬಸ್ಟರ್’ ಬಾಂಬ್‌ಗಳು ಭೂಗರ್ಭದಲ್ಲಿರುವ ಗುರಿಗಳನ್ನು ನಾಶ ಮಾಡಲು ವಿನ್ಯಾಸಗೊಳಿಸಲ್ಪಟ್ಟಿವೆ. ಗಟ್ಟಿಯಾದ ಉಕ್ಕಿನ ಹೊದಿಕೆಯಿಂದ ಇವು ಮಣ್ಣು ಮತ್ತು ಕಾಂಕ್ರೀಟ್ ಪದರಗಳನ್ನು ಭೇದಿಸಿ ಒಳಗೆ ಪ್ರವೇಶಿಸಿ ನಂತರ ಸ್ಫೋಟಗೊಳ್ಳುತ್ತವೆ.


ಈ ಬಾಂಬ್‌ಗಳಲ್ಲಿ ‘ಹಾರ್ಡ್ ಟಾರ್ಗೆಟ್ ಸ್ಮಾರ್ಟ್ ಫ್ಯೂಸ್’ ತಂತ್ರಜ್ಞಾನ ಬಳಸಲಾಗುತ್ತದೆಗುರಿಯ ಆಳವನ್ನು ಗುರುತಿಸಿ ಸರಿಯಾದ ಸಮಯದಲ್ಲಿ ಸ್ಫೋಟಗೊಳ್ಳುತ್ತದೆಕೆಲವೊಂದು ಮಾದರಿಗಳು ಧ್ವನಿಯ ಆಧಾರದ ಮೇಲೆ ಕೂಡ ಸ್ಫೋಟಗೊಳ್ಳುವ ಸಾಮರ್ಥ್ಯ ಹೊಂದಿವೆ
ಈ ರೀತಿಯ ಬಾಂಬ್‌ಗಳು ದ್ವಿತೀಯ ವಿಶ್ವಯುದ್ಧ ಕಾಲದಿಂದಲೇ ಬಳಕೆಯಲ್ಲಿದ್ದು, ನಂತರ ಇರಾಕ್ ವಾರ್ ಆಫ್ಘಾನ್ s ಸಂದರ್ಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಟ್ಟಿವೆ.


ಉದ್ವಿಗ್ನತೆ ಹೆಚ್ಚಳ


ಈ ದಾಳಿ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉಂಟಾಗಿರುವ ಯುದ್ಧ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಪಾಕಿಸ್ತಾನ, ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ಶಾಂತಿ ಮಾತುಕತೆಗಾಗಿ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ದಾಳಿ ಜಾಗತಿಕ ಆತಂಕವನ್ನು ಹೆಚ್ಚಿಸಿದೆ.