ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ಒಲಿದ ಕಂಚಿನ ಪದಕ

ಕಲಬುರಗಿ:ಸೆ.25:ನಗರದ ಗೋದುತಾಯಿ ಬಡಾವಣೆಯ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿಘ್ನೇಶ ಬಿರಾದಾರ ವಿದ್ಯಾರ್ಥಿಯು ಕೇರಳದ ಕೋಲಂನಲ್ಲಿ ಸೆ. 13 ಮತ್ತು ಸೆ. 14 ರಂದು ಆಯೋಜಿಸಿದ್ದ 6ನೇ ಸೌತ್‍ಜೋನ್ ರೋಲ್‍ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ 17 ವರ್ಷದ ಒಳಗಿನ ಬಾಲಕರ ಸ್ಪರ್ಧೇಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾದ ವಿಘ್ನೇಶ ಬಿರಾದಾರ ಗೆ ಕಂಚಿನ ಪದಕ ಒಲಿದು ಬಂದಿದೆ.

ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸವರಾಜ ಭೀಮಳ್ಳಿ ಉಪಾಧ್ಯಕ್ಷರಾದ ಎಂ.ವೈ ಪಾಟೀಲ್ ಹಾಗೂ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿ ಅವರು ಅಭಿನಂದಿಸಿದ್ದಾರೆ. ಅಲ್ಲದೇ ಪ್ರಾಂಶುಪಾಲರಾದ ನಾಗೇಂದ್ರ ಬಡಿಗೇರ್ ದೈಹಿಕ ಶಿಕ್ಷಕರಾದ ಶಿವಾನಂದ ಕಲಶೆಟ್ಟಿ ಮತ್ತು ಮಹಾಂತೇಶ ಮಡಿವಾಳ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.