ಬಾಕ್ಸಿಂಗ್ : ರಾಷ್ಟ್ರಮಟ್ಟದ ಸಿಬಿಎಸ್‍ಸಿ ಪಂದ್ಯಾವಳಿಗೆ ಆಯ್ಕೆ

ಕಲಬುರಗಿ,ಆ.26: ಕಲಬುರಗಿ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಬಾಕ್ಸಿಂಗ್‍ಪಟುಗಳು ಮೊದಲಬಾರಿಗೆ ಸಿಬಿಎಸ್‍ಸಿ ಝೋನಲ್ ಹಂತದಲ್ಲಿ ಎರಡು ಬೆಳ್ಳಿ ಪದಕ ಹಾಗೂ ಒಂದು ಕಂಚಿನ ಪದಕ ಪಡೆದಿದ್ದಾರೆ.
ಕಲಬುರಗಿ ಅಮೆಚೂರ ಬಾಕ್ಸಿಂಗ್ ಅಸೋಸಿಯೇಷನ್ ತರಬೇತಿದಾರರಾದ ದೇವಶ್ರೀ ಕೆ ಡಿ, ನಗರದ ಜೀ ಮೌಂಟ್ ಲೀಟೆರ್ ಶಾಲೆಯ ಮಾರ್ಗದರ್ಶನದಲ್ಲಿ ಜೀ ಮೌಂಟ್ ಲೀಟೆರ್ ಶಾಲೆ ವಿದ್ಯಾರ್ಥಿಗಳು ಮಹಾರಾಷ್ಟ್ರದ ನಾಗಪುರದಲ್ಲಿ ಜುಲೈ ತಿಂಗಳಲ್ಲಿ ನಡೆದ ಸಿಬಿಎಸ್‍ಸಿ ಝೋನಲ್‍ನಲ್ಲಿ ಭಾಗವಹಿಸಿದರು.
ಸತ್ಮಿತ ಸಿಂಗ್ -56-60ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ,ಇಸ್ಮೀತ್ ಸಿಂಗ್ 52-56 ಕೆಜಿ ವಿಭಾಗಲ್ಲಿ ಬೆಳ್ಳಿ ಪದಕ ಮತ್ತು ಶಹನ್ ಮಾರ್ಶಲ್ 46 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಕಲಬುರಗಿ ಜಿಲ್ಲೆಗೆ ಹೆಸರು ತಂದಿದ್ದಾರೆ.
ಅಲ್ಲದೆ ಈ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸಿಬಿಎಸ್‍ಸಿ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ .ಈ ಪ್ರಯುಕ್ತ ಜಿಲ್ಲಾಧಿಕಾರಿ ಫೌಜಿಯಾ ತರನುಮ್ ಅವರು ವಿದ್ಯಾರ್ಥಿ ಹಾಗೂ ತರಬೇತಿದಾರರಾದ ದೇವಶ್ರೀ ಕೆ.ಡಿ. ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಕಿಶೋರ ಗಾಯಕವಾಡ, ಸೃಷ್ಟಿ ಫೌಂಢಶನ್ ಎನ್ ಜಿ ಒ ಮುಖ್ಯಸ್ಥರಾದ ರಾಜೇಶ್ವರಿ ಕೆ.ಜಿ,ಕಲಬುರಗಿ ಅಮೆಚೂರ ಬಾಕ್ಸಿಂಗ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಬಿ ಎಸ್ ಬಿರಾದಾರ ಇದ್ದರು