
ರಬಕವಿ ಬನಹಟ್ಟಿ,ಮಾ.೯: ಬಯಲು ಶೂನ್ಯದ ರೂಪ. ಬಯಲಿನಲ್ಲಿ ಬದುಕು ತುಂಬುವುದಕ್ಕಿAತ ಬದುಕಿನಲ್ಲಿ ಬಯಲು ತುಂಬುವುದೇ ಪಾರಮಾರ್ಥ. ನಡೆನುಡಿ ಅದ್ವೆöÊತವಾದಾಗ ಬದುಕೆಲ್ಲ ಭಕ್ತಿಯ ಪರಿಮಳ ಎನ್ನುವ ಜವಳಗಿಯವರು ಆಧ್ಯಾತ್ಮದ ಅದ್ವೆöÊತ ಕವಿಯೆಂದು ನಾವಲಗಿ ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಭೀಮಪ್ಪ ಬಿ. ಕುಂಬಾರ ಹೇಳಿದರು.
ಬನಹಟ್ಟಿಯ ಲಕ್ಷಿö್ಮÃ ನಗರದಲ್ಲಿರುವ ಶಿವಾನಂದ ಕಾಗಿಯವರ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿ?Àತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕಾ ಘಟಕ ರಬಕವಿ ಬನಹಟ್ಟಿ, ವಲಯ ಮಹಾಲಿಂಗಪುರ ಇವರು ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-೫೧ ಕಾರ್ಯಕ್ರಮದಲ್ಲಿ ಬನಹಟ್ಟಿಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಜವಳಗಿಯವರ ಬೀಳಗಿ ಪ್ರಥಮ ಸಾಹಿತ್ಯ ಸಮ್ಮೇಳನ ದತ್ತಿ ಪ್ರಶಸ್ತಿ ಪುರಸ್ಕೃತ ಬಯಲು ಸಾನ್ನಿಧ್ಯ ಕೃತಿಯನ್ನು ಅವಲೋಕಿಸಿ ವ್ಯಕ್ತಿನಿಷ್ಠೆಗಿಂತ ವಸ್ತುನಿಷ್ಠ ವಿಚಾರಗಳನ್ನು ಬಯಲು ಸಾನ್ನಿಧ್ಯ ಕೃತಿಯಲ್ಲಿ ಕಾಣಬಹುದು ಎಂದರು.
ಸAವಾದದಲ್ಲಿ ರವೀಂದ್ರ ಅಷ್ಟಗಿ, ವೈ.ಬಿ.ಕೊರಡೂರ, ಎಂ.ಎಸ್. ಬದಾಮಿ, ದಾಕ್ಷಾಯಣಿ ಮಂಡಿ, ಚಂದ್ರಪ್ರಭಾ ಬಾಗಲಕೋಟ, ಮಹಾಶಾಂತ ಶೆಟ್ಟಿ, ಡಾ.ಡಿ.ಎ.ಬಾಗಲಕೋಟ, ಎಸ್.ಎಸ್.ಹಿರೇಮಠ ಪ್ರಶ್ನೆಗಳನ್ನು ಕೇಳಿದರು. ಕೃತಿಕಾರರಾದ ಮಲ್ಲಿಕಾರ್ಜುನ ಜವಳಗಿ ಉತ್ತರಿಸಿದರು.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇದೇ ಸಂದರ್ಭದಲ್ಲಿ ಬನಹಟ್ಟಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು, ಮಹಿಳಾ ಸಾಹಿತಿ ಚಂದ್ರಪ್ರಭಾ ಬಾಗಲಕೋಟ ಅವರನ್ನು ತಾಲೂಕಾ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಶುಭ ಕೋರಲಾಯಿತು.
ನಿವೃತ್ತ ಪಶುವೈದ್ಯಾಧಿಕಾರಿ ಡಾ. ರುದ್ರಪ್ಪ ಕಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ರಬಕವಿ-ಬನಹಟ್ಟಿ ತಾಲೂಕಾ ಅಧ್ಯಕ್ಷ ಮ. ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಯುಗಾದಿ ಪ್ರಯುಕ್ತ ಕವಿಗೋಷ್ಠಿಯನ್ನು ಮಾ.೧೯ರಂದು ರಬಕವಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಎಪ್ರಿಲ್, ಮೇ ತಿಂಗಳಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಭಾವ ಸಂಗಮ, ಜಾನಪದ ಝೇಂಕಾರ, ಭಕ್ತಿಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಶಿವಾನAದ ದಾಶಾಳ, ಮೃತ್ಯುಂಜಯ ರಾಮದುರ್ಗ, ತಾಲೂಕಾ ಕಸಾಪ ಮಾಧ್ಯಮ ಕಾರ್ಯದರ್ಶಿ ಮಲ್ಲಿಕಾರ್ಜುನ ತುಂಗಳ, ಹಿರಿಯ ಪತ್ರಕರ್ತ ವಿಶ್ವಜ ಕಾಡದೇವರ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪಿ.ಆರ್. ಒಡೆಯರ, ಖಜಾಂಚಿ ಪ್ರಕಾಶ ಕಂಪನಾಯಕ, ನಗರಸಭಾ ಸದಸ್ಯ ಅರುಣ ಬುದ್ನಿ, ಭಾರತಿ ಪಾವಟೆ, ಶಾಂತಾ ಸೋರಗಾಂವಿ, ಲಕ್ಷಿö್ಮÃ ನಿಂಬರಗಿ ಕಸಾಪ ಪದಾಧಿಕಾರಿಗಳು, ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಕಲಾವಿದರು ಭಾಗವಹಿಸಿದ್ದರು.
ಶಿಕ್ಷಕ ಮಹಾಲಿಂಗ ಚಿಮ್ಮಡ ಪ್ರಾರ್ಥಿಸಿದರು. ಶರತ್ ಜಂಬಗಿ ಸ್ವಾಗತಿಸಿದರು. ವಿರುಪಾಕ್ಷ ಫಕೀರಪೂರ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.


























