
ರಬಕವಿ ಬನಹಟ್ಟಿ ,ಏ.೧೩: ನಮ್ಮ ನಾಡಿನ ಅನೇಕ ಸಂತರು, ಶರಣರು, ಅನುಭಾವಿಗಳು ಸಾಧಿಸಿ ತೋರಿದ ನುಡಿಗಳಿಗೆ ಬೆಲೆ ಕಟ್ಟಲಾಗದು. ಅವರು ನುಡಿದಂತೆ ನಡೆದವರು, ನಡೆದಂತೆ ನುಡಿದವರು. ಅವು ನಮ್ಮ ಹೃದಯ ಮಂದಿರದಲ್ಲಿಟ್ಟು ಆರಾಧಿಸವಂತಹವು. ಸವೆಯಲಾಗದ ಸಂಪತ್ತು, ಜೀವನ ಪಾವನಗೊಳಿಸುವ, ಬದುಕಿಗೆ ಬೆಳಕನ್ನು ನೀಡುವ ಮೌಲಿಕ ಅಂಶಗಳನ್ನೊಳಗೊAಡ ಕೃತಿ ತವನಿಧಿಯಾಗಿದೆ ಎಂದು ಜಮಖಂಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು, ಸಾಹಿತಿ ಡಾ. ವಾಯ್. ವಾಯ್. ಕೊಕ್ಕನವರ ಹೇಳಿದರು.
ಕನ್ನಡ ಸಾಹಿತ್ಯ ಪರಿ?Àತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕಾ ಘಟಕ ರಬಕವಿ ಬನಹಟ್ಟಿ, ವಲಯ ಮಹಾಲಿಂಗಪುರ ಇವರ ಸಂಯುಕ್ತಾಶ್ರಯದಲ್ಲಿ ಹೊಸೂರಿನ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-೫೨ ಕಾರ್ಯಕ್ರಮದಲ್ಲಿ ಜಮಖಂಡಿ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಇಂಡಿಯವರ ತವನಿಧಿ ಕೃತಿಯನ್ನು ಅವಲೋಕಿಸಿ ಮಾತನಾಡಿದರು ಎಂದರು.
ವೆAಕಟೇಶತ. ನಿಂಗಸಾನಿ ವಕೀಲರು ಅಧ್ಯಕ್ಷತೆ ವಹಿಸಿ ಪುಸ್ತಕಾವಲೋಕನ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾರ್ಯಕ್ರಮವಾಗಿದೆ. ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ತಾಲೂಕಾ ಸಾಹಿತ್ಯ ಪರಿ?Àತ್ತಿನ ಕ್ರಿಯಾಶೀಲ ನಡೆ ಗಮನಾರ್ಹವಾಗಿದೆ ಎಂದರು.
ನಂತರ ನಡೆದ ಸಂವಾದದಲ್ಲಿ ಡಾ. ರವಿ ಜಮಖಂಡಿ, ಮಹಾಶಾಂತ ಶೆಟ್ಟಿ, ಶಿವಾನಂದ ದಾಶಾಳ ಪ್ರಶ್ನೆಗಳನ್ನು ಕೇಳಿದಾಗ ಕೃತಿಕಾರರಾದ ಮಲ್ಲಿಕಾರ್ಜುನ ಇಂಡಿಯವರು ಉತ್ತರಿಸಿದರು. ಸಾಹಿತ್ಯಕ್ಷೇತ್ರ ಬಹಳ ದೊಡ್ಡದು. ಅನೇಕ ಸಾಧಕರನ್ನು, ದತ್ತಿ ದಾನಿಗಳನ್ನು ಭೇಟಿ ಮಾಡಿ, ಮಾಹಿತಿ ಕಲೆಹಾಕಿ, ವಚನಗಳ ತಾತ್ವಿಕ, ಮೌಲಿಕ ಹಿನ್ನೆಲೆಗಳ ಆಧರಿಸಿ ತವನಿಧಿ ಕೃತಿ ಪ್ರಕಟವಾಗಿದೆ ಎಂದರು.
ಕಸಾಪ ತಾಲೂಕಾಅಧ್ಯಕ್ಷ ಮ.ಕೃ.ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪುಸ್ತಕಾವಲೋಕನ ಓದುಗರನ್ನು, ಸಾಹಿತ್ಯಾಸಕ್ತರನ್ನು ಸೆಳೆಯುವಲ್ಲಿ ಯಶಸ್ಸು ಕಾಣುತ್ತಿದೆ. ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ, ಸಾಹಿತ್ಯಾಸಕ್ತರ ನೆರವು, ಮಾಧ್ಯಮದವರ ಪ್ರೊತ್ಸಾಹದೊಂದಿಗೆ ಪರಿ?Àತ್ತು ವಿಶೇ?À ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳಲಿದೆ ಎಂದರು.
ನಿವೃತ್ತ ನೌಕರರ ಸಂಘ ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷ ಮೃತ್ಯುಂಜಯರಾಮದುರ್ಗ, ಮಹಾದೇವ ಕವಿಶೆಟ್ಟಿ, ಮಲ್ಲಿಕಾರ್ಜುನ ಜವಳಗಿ, ಇಂದುಧರ ಬೆಳಗಲಿ, ರವೀಂದ್ರ ಅಷ್ಟಗಿ, ಮಲ್ಲೇಶಪ್ಪ ಕುಚನೂರ, ಉದ್ಯಮಿ ಬಸವರಾಜ ದಲಾಲ, ಅರುಣ ಬುದ್ನಿ, ಮಲ್ಲಪ್ಪ ಗಣಿ, ಈರಯ್ಯ ಹಿರೇಮಠ, ಈರಣ್ಣ ಗಣಮುಖಿ, ಮಲ್ಲಪ್ಪ ಎಸ್. ಕುಂಬಾರ, ಬಿ.ಎಂ. ಹಳೇಮನಿ, ಬಸವರಾಜ ಬುಟ್ಟಣ್ಣನವರ, ವಿರುಪಾಕ್ಷ ಫಕೀರಪುರ, ಕರವೀರಪ್ಪ ಕರಿಜಾಡರ, ಘೂಳಪ್ಪ ಯರಗಟ್ಟಿ, ಶ್ರೀಶೈಲ ನಾಗರಾಳ ಸೇರಿದಂತೆ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಕಲಾವಿದರು, ಕಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಕ ಸಿದ್ಧಲಿಂಗ ಕಡಕೋಳ ಪ್ರಾರ್ಥಿಸಿದರು. ಸಾಹಿತಿ ಶಿವಾನಂದ ದಾಶಾಳ ಸ್ವಾಗತಿಸಿದರು. ಸಂತೋ?À ಕರಿಜಾಡರ, ಚಂದ್ರಕಾAತ ಜೈನಾಪೂರ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.




















