Home ಜಿಲ್ಲೆ ಕಲಬುರಗಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಕಾಳಗಿ : ಏ.6:ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.

ಈ ವೇಳೆ ಭೀಮರಾಯ ಮಲಘಾಣ ಮಾತನಾಡಿ ರಾಷ್ಟ್ರೀಯ ಚಿಂತನೆಗಳ ಮೂಲಕ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ಪಕ್ಷದ ಹಿರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಿದೆ. ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮವನ್ನು ಗೌರವಿಸಬೇಕು ಎಂದರು.

ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಗದೀಶ ಪಾಟೀಲ, ಸುಂದರ ಸಾಗರ, ಕಾಳು ಪಡಶೆಟ್ಟಿ, ಪುರುಷೋತ್ತಮ ಗುತ್ತೇದಾರ, ಸುರೇಶ ಸೇಗಾಂವಕರ, ಬಾಬು ಹೀರಾಪುರ, ತಿಮ್ಮಯ್ಯ ಒಡೆಯರಾಜ, ಸಚಿನ ಉಳಗಡ್ಡಿ, ಬಂಡು ಬೊಮ್ಮಣಿ, ಬಲರಾಮ ವಲ್ಲ್ಯಾಪುರ, ಸುನಿಲ ರಾಜಾಪುರ, ನಾಗರಾಜ ಪಾಟೀಲ, ರಾಜು ಒಡೆಯರಾಜ, ಇಂದ್ರಜೀತ ಕಟ್ಟಿಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.