
ಕಲಬುರ್ಗಿ :ಅ.14: ಗುಲ್ಬರ್ಗ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಜೈವಿಕ ತಂತ್ರಜ್ಞಾನ ಮೇಳ ಪ್ರದರ್ಶನ ಹಮ್ಮಿಕೊಂಡಿತ್ತು. ಈ ಪ್ರದರ್ಶನ ಮೇಳಕ್ಕೆ ನಗರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಎಂಟನೂರು ವಿದ್ಯಾರ್ಥಿಗಳು ಬೇಟಿ ಕೊಟ್ಟು ಪ್ರದರ್ಶನ ಮೇಳವನ್ನು ವಿಕ್ಷಣೆ ಮಾಡಿದರು.
ಪ್ರಸ್ತುತ ದಿನಗಳಲ್ಲಿ ಜೈವಿಕ ಇಂಧನವು ಪರಿಸರ ಸ್ನೇಹಿ ಮತ್ತು ನವೀಕರಿಸಬಹುದಾದ ಇಂಧನ ಮೂಲವಾಗಿದೆ. ಇದು ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಸಸ್ಯಜನ್ಯ ವಸ್ತುಗಳು ಮತ್ತು ಜೈವಿಕ ತ್ಯಾಜ್ಯಗಳಿಂದ ತಯಾರಿಸಲಾಗುತ್ತದೆ. ಜೈವಿಕ ಇಂಧನಗಳು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಲ್ಲದೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಹೀಗೆ ಹಲವು ಮೋಡೆಲ್ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಇಲ್ಲಿ ಮಾಹಿತಿ ಹೇಳಿಕೊಡಲಾಯಿತು.
ಈ ಪ್ರದರ್ಶನದ ಮೂಲ ಉದ್ದೇಶ ಎಂದರೆ ಭವಿಷ್ಯತ್ತಿನಲ್ಲಿ ಮಕ್ಕಳಿಗೆ ಪ್ರಯೋಗಾತ್ಮಕವಾಗಿ ತಿಳಿಸುವ ಉದ್ದೇಶದಿಂದ ಈ ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ಚಂದ್ರಕಾಂತ ಕೆಳಮನಿ ಮಾಹಿತಿ ತಿಳಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ, ರಮೇಶ್ ಲಂಡನಕರ್ ಪ್ರದರ್ಶನ ಮೇಳ ಉದ್ಘಾಟಿಸಿದರು.
ಡಾ. ಎಂ. ಬಿ. ಸುಲೋಚನಾ, ಡಾ. ತಥಾಗಥ್ ವಾಗ್ಮೋರೆ, ಡಾ. ಪ್ರಥ್ವಿರಾಜ್ ಬಂಢಾರೆ, ಡಾ. ರಶ್ಮಿ ಮುಂತಾದವರು ಭಾಗವಹಿಸಿದ್ದರು.
ನಮಗೆ ಉತ್ತಮ ಆರೋಗ್ಯ ಮತ್ತು ಪೌಷ್ಟಿಕ ಆಹಾರದಷ್ಟೇ ಸ್ವಚ್ಛ ಪರಿಸರವೂ ಮುಖ್ಯ. ಪರಿಸರ ಜೈವಿಕ ತಂತ್ರಜ್ಞಾನವು ಮಾಲಿನ್ಯ, ತ್ಯಾಜ್ಯ ವಿಲೇವಾರಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವು ಬಗೆಯಲ್ಲಿ ಶಾಲಾ ಮಕ್ಕಳಿಗೆ ಮಾಹಿತಿ ನಿಡಲಾಯಿತು.
ಡಾ. ತಥಾಗಥ್ ವಾಗ್ಮೋರೆ
ಅತಿಥಿ ಪ್ರಾಧ್ಯಾಪಕರು
ಜೈವಿಕ ತಂತ್ರಜ್ಞಾನ ವಿಭಾಗ
ಗುಲ್ಬರ್ಗ ವಿಶ್ವವಿದ್ಯಾಲಯ