
ಕಲಬುರಗಿ,ಫೆ.20-ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತೋತ್ಸವದ ಅಂಗವಾಗಿ ರಮೇಶ್ ಎಂ. ಚಿಚ್ಚಕೊಟೆ ರಚಿಸಿದ “ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ” ಕೃತಿಯನ್ನು ವಿಜೃಂಭಣೆಯಿಂದ ಲೋಕಾರ್ಪಣೆ ಮಾಡಲಾಯಿತು.
ವಿಶ್ವ ಕಂಡ ಅಪ್ರತಿಮ ನಾಯಕ, ಸ್ವರಾಜ್ಯದ ಶಿಲ್ಪಿ, ಧೈರ್ಯ-ಶೌರ್ಯದ ಪ್ರತೀಕವಾಗಿದ್ದ ಶಿವಾಜಿ ಮಹಾರಾಜರ ಜೀವನ, ಆದರ್ಶ ಮತ್ತು ಸ್ವಾಭಿಮಾನವನ್ನು ಈ ಕೃತಿ ಒಳಗೊಂಡಿದೆ.
1630ರಲ್ಲಿ ಶಿವನೇರಿ ಕೋಟೆಯಲ್ಲಿ ಜನಿಸಿದ ಶಿವಾಜಿ ಮಹಾರಾಜರು ಜನಾಧಾರಿತ ಆಡಳಿತ ಮತ್ತು ಸ್ವಾತಂತ್ರ್ಯದ ಸಂಕಲ್ಪದ ಮೂಲಕ ಭಾರತದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ.
ಜಯಂತೋತ್ಸವದ ಅಂಗವಾಗಿ ನಡೆದ ಈ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಕಾರ್ಯಕ್ರಮಕ್ಕೆ ವಿಶೇಷ ಘನತೆ ನೀಡಿತು.
ಈ ಸಂದರ್ಭದಲ್ಲಿ ಶಿಷ್ಟಾಚಾರ ತಹಶೀಲ್ದಾರ ಶಿವಪ್ರಭು ಪಾಟೀಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಿಕಿ ಜಗದೀಶ್ವರಿ ಶಿವಕೇರಿ ಮತ್ತು ರಾಜ್ಯ ಕೆಕೆಎಂಪಿ ಸಲಹೆಗಾರರದ ಸೂರ್ಯಕಾಂತ ಕದಂ, ಛತ್ರಪತಿ ಶಿವಾಜಿ ಮಹಾರಾಜ್ ಬ್ಯಾಂಕಿನ ಅಧ್ಯಕ್ಷÀ ಡಾ.ದಿನಕರ ಮೋರೆ, ಜಿಲ್ಲಾ ಅಧ್ಯಕ್ಷ ಆರ್.ಬಿ.ಜಗದಾಳೆ, ಸಮಾಜದ ಹಿರಿಯರು ಮತ್ತು ಮುಖಂಡರು ಉಪಸ್ಥಿತರಿದ್ದರು.

























