ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಅ.15:ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಜೀವ ರಕ್ಷಣಾ ಕವಚ ಹೆಲ್ಮೆಟ್ ನ್ನು ಕಡ್ಡಾಯವಾಗಿ ಧರಿಸಿರಿ ನಿಮ್ಮ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಿ ಎಂದು ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದರು
ಅವರು ಪಟ್ಟಣದಲ್ಲಿ ಮಾತನಾಡುತ್ತಾ ಬೈಕ್ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು. ಇದರಿಂದ ನಿಮ್ಮ ಸುರಕ್ಷೆಯ ಜೊತೆಗೆ ಪ್ರಾಣಾಪಾಯದಿಂದ ಪಾರಾಗಬಹುದು ರಸ್ತೆ ನಿಯಮಗಳನ್ನು ಅರಿತು ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಬೇಕು. ಅವಸರವೇ ಅಪಘಾತಕ್ಕೆ ಕಾರಣ ರಸ್ತೆ ನಿಯಮಗಳನ್ನು ಪಾಲಿಸಬೇಕು. ಶಾಲೆ- ಕಾಲೇಜು, ಜನನಿಬಿಡ ಪ್ರದೇಶದಲ್ಲಿ ವೇಗವಾಗಿ ಬೈಕ್ ಚಲಾಯಿಸದೆ, ತಿರುವಿನಲ್ಲಿ ಜಾಗ್ರತೆಯಿಂದ ಸಾಗಬೇಕು ಎಂದರು.
ಹೆಲ್ಮೆಟ್ ಧರಿಸದವರನ್ನು ಹಿಡಿದು ದಂಡ ವಿಧಿಸುವುದು ಪೆÇಲೀಸರ ಉದ್ದೆ?ಶವಲ್ಲ. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯ ಜೀವ ಕಾಪಾಡಲಿ ಎಂಬ ಸದುದ್ದೆ?ಶ ಪೆÇಲೀಸ್ ಇಲಾಖೆಯದ್ದಾಗಿದೆ. ಯಾವುದೇ ಜನ ಹಿತಾಸಕ್ತಿಯ ಯೋಜನೆ ಸಾಕಾರವಾಗಲು ಜನರ ಸಹಭಾಗಿತ್ವ ಅತಿ ಮುಖ್ಯ. ಆದ್ದರಿಂದ ಸಾರ್ವಜನಿಕರು ಸ್ವಯಂ ಪ್ರೆ?ರಣೆಯಿಂದ ಹೆಲ್ಮೆಟ್ ಧರಿಸುವ ಮೂಲಕ ಪೆÇಲೀಸ್ ಇಲಾಖೆಯ ಕಾರ್ಯಕ್ಕೆ ಕೈಜೋಡಿಸಬೇಕು. ಮನೆಯಲ್ಲಿ ಯಾರೇ ಆದರೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದರೆ ಅವರನ್ನು ಎಚ್ಚರಿಸುವುದು ಯುವಕರ ಕರ್ತವ್ಯ. ಮುಖ್ಯವಾಗಿ ಯುವಕರು ಮೊದಲು ಹೆಲ್ಮೆಟ್ ಧರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಅವರು ಹೇಳಿದ ಅವರು ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ ಪೆÇಲೀಸರ ಕಾರ್ಯ ನಿಜಕ್ಕೂ ಒಳ್ಳೆಯದು. ಹೆಲ್ಮೆಟ್ ಧರಿಸುವುದರಿಂದ ಅಪಘಾತದ ಸಂದರ್ಭದಲ್ಲಿ ಜೀವ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಹಾಕುವಂತೆ” ಮನವಿ ಮಾಡಿದರು.