Home ಜಿಲ್ಲೆ ಚಿದ್ರಿ ಗ್ರಾಮದಲ್ಲಿ ಬೊಮ್ಮಗೊಂಡೇಶ್ವರ ವೃತ್ತ ಪುನರ್‌ನಿರ್ಮಾಣಕ್ಕೆ ಭೂಮಿ ಪೂಜೆ

ಚಿದ್ರಿ ಗ್ರಾಮದಲ್ಲಿ ಬೊಮ್ಮಗೊಂಡೇಶ್ವರ ವೃತ್ತ ಪುನರ್‌ನಿರ್ಮಾಣಕ್ಕೆ ಭೂಮಿ ಪೂಜೆ

ಬೀದರ:ಮಾ.೯:ಜಿಲ್ಲೆಯ ಚಿದ್ರಿ ಗ್ರಾಮದಲ್ಲಿ ಸುಮಾರು ೬೦ ವರ್ಷಗಳ ಇತಿಹಾಸ ಹೊಂದಿರುವ ಬೊಮ್ಮಗೊಂಡೇಶ್ವರ ವೃತ್ತದ ಪುನರ್‌ನಿರ್ಮಾಣಕ್ಕಾಗಿ ಭೂಮಿ ಪೂಜೆ (ಗುದ್ದಲಿ ಪೂಜೆ) ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಅವರು, ಬೊಮ್ಮಗೊಂಡೇಶ್ವರರು ಬೀದರ ಕೋಟೆಯಲ್ಲಿ ಕೆರೆ ನಿರ್ಮಾಣ ಮಾಡುವುದರ ಜೊತೆಗೆ ಮುಂಬೈಗೆ ಹೋಗುವ ದಾರಿಯನ್ನು ತೋರಿಸುವ ಮೂಲಕ ಹಲವು ಪವಾಡಗಳನ್ನು ಮಾಡಿದ್ದರೆಂದು ಸ್ಮರಿಸಿದರು. ಇಂತಹ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ವೃತ್ತವನ್ನು ಪುನರ್‌ನಿರ್ಮಿಸುವುದು ಸಂತಸದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಶಿಧರ್ ಹೊಸಳಿ, ಸೋಮಶೇಖರ್ ಬಿರಾದಾರ್, ಬೊಮ್ಮಗೊಂಡೇಶ್ವರ ಸಮಿತಿ ಅಧ್ಯಕ್ಷ ವೆಂಕಟೇಶ ಶಾಲಿ (ಚಿದ್ರಿ), ಶ್ರಾವಣ ಫುಲೇಕರ್, ತುಕಾರಾಮ ಚಿಮಕೋಡ, ಪಂಡಿತ ಮೇತ್ರೆ, ರಾಜು ಫುಲೇಕರ್, ವಿಶ್ವನಾಥ್ ಫುಲೇಕರ್, ಬಾಬು ಸಾಹುಕಾರ, ಮಾಣಿಕ್ ದೀಪಕ್ ತೆಲಗಣಿ, ಬಾಬು ಮೇತ್ರೆ, ರಮೇಶ್ ಬಿರಾದಾರ್, ಎಸ್.ಟಿ. ಮೋರ್ಚಾದ ನರಸಪ್ಪ ಸುರಳಿ, ಮಲ್ಲಿಕಾರ್ಜುನ, ಸಂದೀಪ್ ಪಾಟೀಲ, ಧನರಾಜ್ ಮಿರ್ಜಾಪುರೆ, ಸಾಯಿನಾಥ್ ಶಾಲಿ, ಸಚಿನ್ ಮೇತ್ರೆ, ರಾಜು ಮೇತ್ರೆ ಸೇರಿದಂತೆ ಮಹಿಳಾ ಮುಖಂಡರಾದ ನಾಗಮ್ಮ ಪೂಜಾರಿ, ಸುನೀತಾ ಫುಲೇಕರ್ ಹಾಗೂ ಸಂಗಮ್ಮ ಹಲ್ಲಕುಡೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.