
ಕಲಬುರಗಿ,ಮಾ.29-ನಗರದ ಹೊರ ವಲಯ ಅಫಜಲಪುರ ರಸ್ತೆಯ ಶರಣ ಸಿರಸಗಿ ಸೀಮಾಂತರದ ಆದಿ ಬಣಜಿಗ ಸಮಾಜದ ಭೂಮಿಯಲ್ಲಿ ಇದೇ ಏ.5 ರಂದು ಸಮಾಜದ ವಸತಿ ಶಾಲೆ ಹಾಗೂ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗಿದೆ.
ನಗರದ ಜಗತ್ ಬಡಾವಣೆಯ ಮೈಲಾರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಮಾಜದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಮಾರಂಭ ಅತ್ಯಂತ ಯಶಸ್ವೀಯಾಗಿ ನೆರವೇರಿಸಲು ನಿರ್ಧರಿಸಲಾಯಿತು.
ಅಡಿಗಲ್ಲು ಸಮಾರಂಭ ಯಶಸ್ವೀಗೊಳಿಸಲು ಹಲವು ಸಮಿತಿಗಳನ್ನು ರಚಿಸಲು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ವೇದಿಕೆ ಸಮಿತಿ, ಸ್ವಾಗತ ಸಮಿತಿ, ಸ್ವಾಗತ ಸಮಿತಿ, ಪ್ರಚಾರ ಸಮಿತಿ, ಹಣಕಾಸು ಸಮಿತಿ, ಮಹಿಳಾ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಸಮಾಜದ ಗೌರವಾಧ್ಯಕ್ಷರಾದ ಡಾ.ಬಸವರಾಜ ಕೊನೇಕ, ಅಧ್ಯಕ್ಷರಾದ ಶಿವಪುತ್ರಪ್ಪ ಬುರುಡೆ, ಕಾರ್ಯದರ್ಶಿ ರಾಜೇಂದ್ರ ಕರೇಕಲ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.


























