Home ಜಿಲ್ಲೆ ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ವೀಕ್ಷಕರಾಗಿ ರಾಜ್ ಮೈನುದ್ದಿನ್ ಜಮಾದಾರ ನೇಮಕ

ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ವೀಕ್ಷಕರಾಗಿ ರಾಜ್ ಮೈನುದ್ದಿನ್ ಜಮಾದಾರ ನೇಮಕ

ಯಾದಗಿರಿ, ಏ. ೧: ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸಂಘಟನಾ ಬಲವರ್ಧನೆಗೆ ಕ್ರಮ ಕೈಗೊಂಡಿದ್ದು, ವೀಕ್ಷಕರಾಗಿ ಕೆಪಿಸಿಸಿ ಸಂಯೋಜಕರೂ ಹಾಗೂ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ ಮೈನುದ್ದಿನ್ ಎಂ. ಜಮಾದಾರ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಕೆಪಿಸಿಸಿ (ಆಡಳಿತ) ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ ಆದೇಶ ಹೊರಡಿಸಿದ್ದು, ಬಾಗಲಕೋಟೆ ನಗರದ ವಾರ್ಡ್ ಸಂಖ್ಯೆ ೪೭, ೪೮, ೪೯, ೫೦ ಮತ್ತು ೫೧ ಪ್ರದೇಶಗಳ ಸಂಪೂರ್ಣ ಜವಾಬ್ದಾರಿಯನ್ನು ಜಮಾದಾರ ಅವರಿಗೆ ವಹಿಸಲಾಗಿದೆ.

ಪ್ರಚಾರ ಕಾರ್ಯಗಳ ಸಮಗ್ರ ಮೇಲ್ವಿಚಾರಣೆ ಹಾಗೂ ಸಮನ್ವಯ ಸಾಧಿಸುವಂತೆ ಸೂಚನೆ ನೀಡಲಾಗಿದ್ದು, ಸ್ಥಳೀಯ ಘಟಕಗಳೊಂದಿಗೆ ಸಮನ್ವಯ ಸಾಧಿಸಿ ಚುನಾವಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ನಿರ್ದೇಶಿಸಲಾಗಿದೆ.

ಇವರೊಂದಿಗೆ ಐವರು ಸಹಾಯಕ ವೀಕ್ಷಕರನ್ನೂ ನಿಯೋಜಿಸಲಾಗಿದ್ದು, ಒಟ್ಟಾರೆ ಚುನಾವಣಾ ಪ್ರಚಾರ ಹಾಗೂ ಸಂಘಟನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಂಡ ರೂಪಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.