ಬಬಲಾದಿ ಜಾತ್ರೆ: ಈಜು ಬಾರದೆ ಇಬ್ಬರು ಯುವಕರು ನೀರು ಪಾಲು

ವಿಜಯಪುರ, ಫೆ. 23: ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ನೀರಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಕಲ್ಲೋಳ ಗ್ರಾಮದ
ಸಿದ್ದಪ್ಪ ಇಮಡೇರ್ (22) ಮತ್ತು ಪ್ರಜ್ವಲ್ (21) ಮೃತ ದುರ್ದೈವಿಗಳು.
ನತದೃಷ್ಟ ಯುವಕರು ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಗೆ ಬಂದಿದ್ದ ವೇಳೆ ನದಿಗೆ ಇಳಿದಿದ್ದು, ಆಗ ಈ ಅವಘಡ ಸಂಭವಿಸಿದೆ.
ಈ ಇಬ್ಬರು ಯುವಕರಿಗೆ ಈಜು ಬರುತ್ತಿರಲಿಲ್ಲ. ಆದಾಗ್ಯೂ
ನದಿಯಲ್ಲಿ ಇಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಈ ಘಟನೆ ಬಬಲೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.