
ಕಲಬುರಗಿ,ಫೆ.24: ನಿರ್ಲಕ್ಷತನದಿಂದ ವೇಗವಾಗಿ ಆಟೋ ಚಲಾಯಿಸಿ ಮಗುವಿನ ಸಾವಿಗೆ ಕಾರಣವಾದ ಆರೋಪ ಸಾಬೀತಾದ್ದರಿಂದ ಆಟೋಚಾಲಕನಿಗೆ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‍ಸಿ ನ್ಯಾಯಾಲಯವು 2 ವರ್ಷ ಸಾದಾ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದೆ.
ಸುಲೇಪೇಟ ಗ್ರಾಮದ ಬಸವರಾಜ ಶಿವಪುತ್ರಪ್ಪ ಲೋಡನೂರ ಶಿಕ್ಷೆಗೊಳಗಾದ ಆಟೋಚಾಲಕ.
2020 ರ ಸಪ್ಟೆಂಬರ್ 22 ರಂದು ಚಿಂಚೋಳಿಯಲ್ಲಿ ಪ್ರಯಾಣಿಕರನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದಾಗ ವೇಗದಿಂದ ಸಾಗುತ್ತಿದ್ದ ಆಟೋದಿಂದ ಒಂದು ವರ್ಷದ ಮಗು ಕೆಳಗೆ ಬಿದ್ದು ಗಾಯಗೊಂಡು ಸಾವಿಗೀಡಾಗಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಾದವಿವಾದ ಆಲಿಸಿದ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಪಾಟೀಲ ಅವರು ವಾದ ಮಂಡಿಸಿದ್ದರು.


























