
ಟೆಹ್ರಾನ್, ಏ.೬-ಇರಾನ್‌ನ ರಾಜಧಾನಿ ಟೆಹರಾನ್‌ನ ವಸತಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ೧೩ ಮಂದಿ ಸಾವನ್ನಪ್ಪಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಇರಾನ್ ಸೇರಿದಂತೆ ಯುದ್ಧಪೀಡಿತ ಪ್ರದೇಶದಾದ್ಯಂತ ಹಿಂಸಾಚಾರ ತೀವ್ರಗೊಳ್ಳುತ್ತಿದ್ದು, ಇರಾನ್, ಇಸ್ರೇಲ್, ಕುವೈತ್ ಮತ್ತು ಲೆಬನಾನ್‌ನಲ್ಲಿ ನಡೆದ ದಾಳಿ, ಪ್ರತಿದಾಳಿ ಮತ್ತು ಸಾವುನೋವು ಮತ್ತು ಹಾನಿ ಉಂಟುಮಾಡುತ್ತಿವೆ ಎಂದು ವರದಿಯಾಗಿದೆ.
ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ೩೮ ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧ ಅಂತ್ಯವಾಗುವ ಲಕ್ಷಣಗಳಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ೨೪ ಗಂಟೆಗಳ ಕಾಲ ಗಡುವು ನೀಡಿದ ನಡುವೆಯೇ ಇರಾನ್ ಮೇಲೆ ನಡೆದ ದಾಳಿಯಲ್ಲಿ ೧೩ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಇರಾನ್ ಒಳಗೆ ಅಮೆರಿಕದ ಫೈಟರ್ ಜೆಟ್ ಪತನಗೊಂಡ ನಂತರ ಎರಡನೇ ವಾಯುಪಡೆಯ ಸಿಬ್ಬಂದಿಯನ್ನು ರಕ್ಷಿಸಿರುವುದಾಗಿ ಅಮೆರಿಕ ದೃಢಪಡಿಸಿದೆ. ಆದರೆ ಆ ಪ್ರದೇಶದಲ್ಲಿ ನಡೆದ ದಾಳಿಗಳಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲ್‌ನಲ್ಲಿ, ಹೈಫಾದಲ್ಲಿನ ವಸತಿ ಕಟ್ಟಡಕ್ಕೆ ಕ್ಷಿಪಣಿ ಡಿಕ್ಕಿ ಹೊಡೆದು ಜನರು ಗಾಯಗೊಂಡು ಕಾಣೆಯಾಗಿದ್ದಾರೆ. ಕೊಲ್ಲಿಯಾದ್ಯಂತ, ಕುವೈತ್‌ನಲ್ಲಿರುವ ಪ್ರಮುಖ ಇಂಧನ ಸೌಲಭ್ಯಗಳಿಗೂ ಸಹ ಹಾನಿಯಾಗಿದ್ದು, ಇದು ದೊಡ್ಡ ಹಾನಿಯನ್ನುಂಟುಮಾಡಿದೆ.
ಈ ನಡುವೆ, ಬೈರುತ್ ಬಳಿ ಸೇರಿದಂತೆ ಲೆಬನಾನ್‌ನ ಕೆಲವು ಭಾಗಗಳಲ್ಲಿ ಇಸ್ರೇಲಿ ದಾಳಿಗಳು ಮುಂದುವರೆದಿದ್ದು, ಅಲ್ಲಿ ಸಾವುನೋವುಗಳು ವರದಿಯಾಗಿವೆ. ತಕ್ಷಣದ ಸಂಘರ್ಷ ವಲಯ ಮೀರಿ ಉದ್ವಿಗ್ನತೆ ಹರಡುತ್ತಿದೆ, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡರೆ ಬಾಬ್ ಎಲ್-ಮಂದಾಬ್ ಜಲಸಂಧಿಯಂತಹ ಇತರ ಪ್ರಮುಖ ಮಾರ್ಗಗಳನ್ನು ಗುರಿಯಾಗಿಸಬಹುದು ಎನ್ನುವ ಎಚ್ಚರಿಕೆ ನೀಡಲಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಪ್ರಾದೇಶಿಕ ಮಧ್ಯವರ್ತಿಗಳು ಯುದ್ಧದಲ್ಲಿ ೪೫ ದಿನಗಳ ಕದನ ವಿರಾಮ ಯೋಜನೆಯನ್ನು ಮತ್ತಷ್ಟು ಮುಂದೆಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಮಧ್ಯವರ್ತಿಗಳ ಪ್ರಕಾರ ಕಳೆದ ಎರಡು ಹಂತದ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಲು ಕೆಲಸ ಮಾಡುತ್ತಿದ್ದಾರೆ. ಮೊದಲ ಹಂತವು ೪೫ ದಿನಗಳ ಕದನ ವಿರಾಮವನ್ನು ಪ್ರಸ್ತಾಪಿಸುತ್ತದೆ, ಈ ಸಮಯದಲ್ಲಿ ಎರಡೂ ಕಡೆಯವರು ಯುದ್ಧಕ್ಕೆ ಶಾಶ್ವತ ಮಾತುಕತೆ ನಡೆಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.























