ಇಸ್ರೇಲ್ ಮೇಲೆ ದಾಳಿ: ಇದು ಸಿಯಾ, ಸುನ್ನಿ ಕದನ:ಯತ್ನಾಳ್ ಪ್ರತಿಕ್ರಿಯೆ

ವಿಜಯಪುರ, ಮಾ. 3:ಇಸ್ರೇಲ್ ಮೇಲೆ ಇರಾನ್ ಹಾಗೂ ಅಮೆರಿಕ ದಾಳಿಯು ಅದು ಅವರವರ ಮಧ್ಯ ಇರುವ ಸಿಯಾ, ಸುನ್ನಿ ಜಗಳ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ರಂಜಾನ್ ನಂತಹ ಪವಿತ್ರ ದಿನಗಳಲ್ಲಿ ಹೊಡೆದಾಡುತ್ತಿದ್ದಾರೆ. ಯಾವ ಧರ್ಮ ಎಲ್ಲಿ ಹುಟ್ಟಿದ್ದು ಅಲ್ಲೇ ಯುದ್ದ ಆರಂಭವಾಗಿದೆ. ಯುದ್ಧಕ್ಕೂ ಭಾರತಕ್ಕೂ ಸಂಬಂಧವಿಲ್ಲ ಎಂದರು.
ಭಾರತ ಎಲ್ಲಾ ದೇಶಗಳ ಜೊತೆ ಒಳ್ಳೆಯ ಸಂಬಂಧವಿರಿಸಿಕೊಂಡಿದೆ. ಇಸ್ರೇಲ್, ಇರಾನ್ ಹಾಗೂ ಅಮೆರಿಕ ಜೊತೆ ಒಳ್ಳೆಯ ಸಂಬಂಧವಿದೆ.
ಭಾರತ ಶಾಂತಿ ಬಯಸುವ ದೇಶ ಎಂದು ತಿಳಿಸಿದರು.
ಅಲ್ಲಿಯಾಗುವ ಯುದ್ಧಕ್ಕೆ ಇಲ್ಲಿ ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು, ಮೂರ್ಖರು, ನಾಲಾಯಕರು ಎಂದು ಟೀಕಿಸಿದರು.
ಬಾಂಗ್ಲಾದಲ್ಲಿ ಹಾಗೂ ಪೆಹೆಲ್ಗಾಮ್ ದಲ್ಲಿ ಹಿಂದೂಗಳನ್ನು ಕೊಲೆ ಮಾಡಿದಾಗ ನಿಮಗೆ ಕಣ್ಣೀರು ಬರಲಿಲ್ಲ. ಏನಾದರೂ ಆದಾಗ ನಿಮಗೆ ಕಣ್ಣೀರು ಬರಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ದೇಶದ ಗಾಳಿ, ನೀರು, ಅನ್ನ ಸೇವಿಸಿ ನಿಮಗೆ ನಿಯತ್ತಿಲ್ಲ. ರಾಜ್ಯದಲ್ಲಿ
ಆರ್.ಎಸ್. ಎಸ್ ಪಥಸಂಚಲನಕ್ಕೆ ನೋಂದಣಿ ಕೇಳುತ್ತಾರೆ.
ಈಗ ಇಲ್ಲಿಯವರು ಕಣ್ಣೀರು ಹಾಕುವುದಕ್ಕೆ, ಖಮನೈ ನಿಧನಕ್ಕೆ ಯಾವುದಾದರೂ ನೋಂದಣಿ ಮಾಡಿದ್ದಾರೆ ಎಂದು ಯತ್ನಾಳ ಪ್ರಶ್ನೆ ಮಾಡಿದರು.
ರಾಜ್ಯದ ಜನರಿಗೆ ಪ್ರಿಯಾಂಕ ಖರ್ಗೆ ಹಾಗೂ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಇಸ್ರೇಲ್ ದಾಳಿ ಖಂಡಿಸಿ ದೇಶದಲ್ಲಿ ಪ್ರತಿಭಟನೆ, ಅಶಾಂತಿ ಮಾಡಿದರೆ ಗುಂಡಿನ ದಾಳಿ ಮಾಡಿ ಮುಗಿಸಬೇಕು.
ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಾಗ ದಾಳಿ ಮಾಡಿದಾಗ ಇವರಿಗೆ ಸಂತೋಷವಾಗಲ್ಲ. ಈಗ ಕಣ್ಣೀರು ಹಾಕುತ್ತಾರೆ. ಕಣ್ಣೀರಿನ ಬದಲಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಯತ್ನಾಳ ವ್ಯಂಗ್ಯವಾಡಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ಕನ್ನಡಿಗರು ಸಿಲುಕಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಕನ್ನಡಿಗರು ಇಡೀ ಪ್ರಪಂಚದಲ್ಲಿದ್ದಾರೆ
ಈಗ ಆಕಸ್ಮಿಕವಾಗಿ ಯುದ್ಧ ಆರಂಭವಾಗಿದೆ. ಭಾರತ ಸರ್ಕಾರ ಎಲ್ಲಾ ಕಡೆ ಅಲರ್ಟ್ ಮಾಡಿದೆ.
ಯುಎಇ, ದುಬೈ, ಸೌದಿ ಅರೇಬಿಯಾ ಜೊತೆ ನಮ್ಮದು ಒಳ್ಳೆ ಸಂಬಂಧವಿದೆ.
ಇಡೀ ಜಗತ್ತಿನಲ್ಲಿ ನಮ್ಮ ಭಾರತೀಯರಿಗೆ ಏನೂ ಆಗಲ್ಲ ಎಂದರು.
ಯುಕ್ರೇನ್ ಯುದ್ದದಲ್ಲಿ ಪಾಕಿಸ್ತಾನದವರು ಭಾರತ ಧ್ವಜ ಹಿಡಿದು ಪಾರಾಗಿ ಬಂದರು.
ಎಲ್ಲ ದೇಶಗಳೊಂದಿಗೆ ಭಾರತದ ಪ್ರಧಾನಿ ಮೋದಿ ಒಳ್ಳೆಯ ಪ್ರೀತಿ ಗಳಿಸಿದ್ದಾರೆ.
ಈಗಲಾದರೂ ಬುದ್ಧಿ ಬಂದು ಇಲ್ಲಿ ಅನ್ನ ಉಣ್ಣುವವರು ಜೈ ಭಾರತ ಎನ್ನಬೇಕು. ಎಂದು ಯತ್ನಾಳ ಹೇಳಿದರು.