ಮಹಿಳೆ ಮೇಲೆ ಹಲ್ಲೆ ಅತ್ಯಾಚಾರ ಯತ್ನ

ಕಲಬುರಗಿ,ಫೆ.8: ನಗರದ ಮಾಲಗತ್ತಿ ಕ್ರಾಸ್ ಇಂದು ಬೆಳಿಗ್ಗೆ ಚಿಂದಿ ಆಯುವ ಮಹಿಳೆ ( 30 ವರ್ಷ)ಯೊಬ್ಬಳ ಮೇಲೆ ಕೆಲವರು ಹಲ್ಲೆ ಮಾಡಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಯತ್ನ ನಡೆಸಿದ್ದಾರೆ ಎಂದು ಸಬ್ ಅರ್ಬನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಗೊಳದಾಗ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.