ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗಾಗಿ ಸುಮಾರು 2681 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ಕಲಬುರಗಿ:ಫೆ.4: ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು ಕಲಬುರಗಿ 2026 27 ನೇ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶಕ್ಕಾಗಿ 10ನೇ ತರಗತಿಯ ವಿದ್ಯಾರ್ಥಿಗಳು ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸಿಬಿಎಸ್‍ಸಿ ಐ ಸಿ ಎಸ್ ಈ ಎಸ್ ಎಸ್ ಎಲ್ ಸಿ ಬೋರ್ಡ್ ಸುಮಾರು 800 ವಿದ್ಯಾರ್ಥಿಗಳು ಮತ್ತು ಸ್ಟೇಟ್ ಬೋರ್ಡ್ ಸುಮಾರು 1881 ವಿದ್ಯಾರ್ಥಿಗಳು ಶ್ರೀ ಗುರು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗಾಗಿ ಸುಮಾರು 2681 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆಯು ತುಂಬಾ ಶಾಂತಿ ಮತ್ತು ವ್ಯವಸ್ಥಿತವಾಗಿ ಸಹಸ್ರ ಸಂಖ್ಯೆಯಲ್ಲಿ ಮಕ್ಕಳ ಜೊತೆಗೆ ಪಾಲಕರು ಆಗಮಿಸಿದ್ದರು, ಕಲ್ಬುರ್ಗಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು, 2002 ರಿಂದ ಸ್ಥಾಪನೆಗೊಂಡು ಈ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಪೆÇ್ರ. ಎ ವೈ ನಾಯ್ಕ್ ಅವರ ಶಿಸ್ತು ಮತ್ತು ಪರಿಶ್ರಮದ ಜೊತೆಗೆ ಒಳ್ಳೆಯ ನುರಿತ ಅನುಭವಿ ಶಿಕ್ಷಕರಿಂದ ಪ್ರಾರಂಭಿಸಿ 80 ವಿದ್ಯಾರ್ಥಿಗಳು ಪ್ರಾರಂಭದಲ್ಲಿದ್ದು ಪ್ರತಿವರ್ಷವು ಉತ್ತಮ ಅಂಕಗಳೊಂದಿಗೆ ತುಂಬಾ ಜನಪ್ರಿಯತೆಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ತುಂಬಾ ಹೆಸರುವಾಸಿಯಾದ ವಿದ್ಯಾ ಸಂಸ್ಥೆಯಾಗಿ ಹೊರಹೊಮ್ಮಿದೆ ಪ್ರಥಮ ಪಿಯುಸಿಯಲ್ಲಿ 9 ಸೆಕ್ಷನ್ ದ್ವಿತೀಯ ಪಿಯುಸಿಯಲ್ಲಿ 9 ಸೆಕ್ಷನ್ ಒಟ್ಟು ಹದಿನೆಂಟು ಸೆಕ್ಷನ್‍ಗಳಿವೆ ಈ ಸಂಸ್ಥೆಯ ವಿದ್ಯಾರ್ಥಿಗಳುಥಿಯರಿ/ ನೀಟ್ /ಕೆ ಸಿಇಟಿ/ಜೆ ಇಇ ಎಲ್ಲಾ ವಿಭಾಗದಲ್ಲಿ ಅತ್ಯುತ್ತಮ ರಾಂಕ್ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಒಳ್ಳೆಯ ಹುದ್ದೆಯನ್ನು ಅಲಂಕರಿಸಿ ಕೊಂಡಿದ್ದಾರೆ.
ಪ್ರತಿ ವರ್ಷವೂ ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣ ಮಕ್ಕಳಲ್ಲಿ ಪೆÇ್ರೀತ್ಸಾಹ ಆಸಕ್ತಿ ಧೈರ್ಯ ಓದಿನ ಕಡೆಗೆ ಹೆಚ್ಚಿನ ಗಮನ ಶಿಸ್ತು ಸತತ ಅಧ್ಯಯನದ ಕಡೆಗೆ ಒಲವು ತೋರಿಸುತ್ತಿದ್ದಾರೆ ಶಿಕ್ಷಕರು ಸರಿಯಾದ ರೀತಿಯಲ್ಲಿ ಬೋಧನೆ ಜೊತೆಗೆ ಆಡಳಿತ ಮಂಡಳಿಯಾದ ಕಾರ್ಯದರ್ಶಿಗಳಾದ ನಿತಿನ್ ಎ ನಾಯ್ಕ್ ಅವರು ಪ್ರತಿದಿನವೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅವರ ಓದಿನ ಕಡೆಗೆ ಗಮನವಹಿಸುತ್ತಾರೆ ಜೊತೆಗೆ ಶ್ರೀಮತಿ ನೇಹಾ ಎನ್ ನಾಯ್ಕ್ ನಾಯ್ಕ್ ಅವರು ಆಡಳಿತ ಅಧಿಕಾರಿಗಳಾಗಿ ಕಾಲೇಜಿನ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರ ಜೊತೆಗೆ ವಿದ್ಯಾರ್ಥಿನಿಯರ ಬಗ್ಗೆ ಶಿಸ್ತು ಕಾಳಜಿ ವಹಿಸುತ್ತಾರೆ.
ಈ ಎಲ್ಲಾ ಕಾರಣಗಳಿಂದ ಈ ಸಂಸ್ಥೆ ಈ ಭಾಗದೊಳಗ ಪಾಲಕರ ಮತ್ತು ವಿದ್ಯಾರ್ಥಿಗಳ ಪಾಲಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ ಈ ಸಂಸ್ಥೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಕ್ಕಳನ್ನು ಒಳ್ಳೆಯ ರೀತಿಯಿಂದ ತಯಾರು ಮಾಡಿ ಕುಟುಂಬಕ್ಕೂ ಸಮಾಜಕ್ಕೂ ಸುಸಂಸ್ಕøತ ವ್ಯಕ್ತಿಯನ್ನಾಗಿ ಮಾಡುವ ಮಹತ್ವದ ಕಳಕಳಿ ಕಾಳಜಿ ಈ ಸಂಸ್ಥೆ ಹೊಂದಿದೆ.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಳಿನಿ ಎ ನಾಯ್ಕ ಪ್ರಾಂಶುಪಾಲರಾದ ವಿದ್ಯಾಸಾಗರ್ ಗೋಗಿ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ಡಾ. ಶಂಕರ ಬಾಳಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದರು.


ನಮ್ಮ ಶಿಕ್ಷಣ ಸಂಸ್ಥೆ ಶ್ರೀ ಗುರು ಕಾಲೇಜು ಇಷ್ಟೊಂದು ಜನಪ್ರಿಯತೆಗೆ ನಮ್ಮ ತಂದೆಯವರ ಶಿಸ್ತು ಮತ್ತು ಪರಿಶ್ರಮ ಜೊತೆಗೆ ನುರಿತ ಅನುಭವಿ ಶಿಕ್ಷಕರು ಇರುವುದರಿಂದ ಈ ಸಂಸ್ಥೆ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.
ಶ್ರೀ ನಿತಿನ್ ಎ ನಾಯ್ಕ್ ಕಾರ್ಯದರ್ಶಿಗಳು ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ಕಲ್ಬುರ್ಗಿ.


ನಮ್ಮ ವಿದ್ಯಾ ಸಂಸ್ಥೆ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶ ಮೊದಲು ಹೊಂದಿದೆ ಒಳ್ಳೆ ಶಿಕ್ಷಕರ ಗುಂಪು ನಮ್ಮ ಜೊತೆಗಿದೆ ಹೀಗಾಗಿ ಪಾಲಕರ ಮತ್ತು ಮಕ್ಕಳ ಮೊದಲ ಆದ್ಯತೆ ಶ್ರೀ ಗುರು ಕಾಲೇಜಿನ ಕಡೆ ಮಹತ್ವ ಕೊಡುತ್ತಾರೆ. ಶ್ರೀಮತಿ ನೇಹಾ ಎನ್ ನಾಯ್ಕ್ ಆಡಳಿತ ಅಧಿಕಾರಿಗಳು ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ಕಲಬುರ್ಗಿ,