Home ಜಿಲ್ಲೆ ನೇಮಕಕ್ಕೆ ಮನವಿ

ನೇಮಕಕ್ಕೆ ಮನವಿ


ಚನ್ನಮ್ಮನ ಕಿತ್ತೂರು,ಮಾ.೨೮: ತಾಪಂ ಕಾರ್ಯಾಲಯದಲ್ಲಿ ತಾಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಪಾಟೀಲವರಿಗೆ ೧೭ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಮತ್ತು ನಗರ ಪುನರ್ ವಸತಿ ಕಾರ್ಯಕರ್ತರೆಲ್ಲರೂ ಸೇರಿ ತಾಲೂಕಾ ವಿವಿಧ್ಯೋದ್ದೇಶ ಪುನರ್ ವಸತಿ ಕಾರ್ಯಕರ್ತರನ್ನು ನೇಮಕ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.


ಮೇಲ್ಕಾಣಿಸಿದ ವಿಷಯಕ್ಕೆ ಸಂಭAದಿಸಿದAತೆ ಕಿತ್ತೂರ ತಾಲೂಕಿನ ಎಲ್ಲಾ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಮತ್ತು ವಿಕಲಚೇತನರ ಪಾಲಕರು-ಪೋಷಕರು ಯಾವುದೆ ಮಾಹಿತಿ ತೆಗೆದುಕೊಂಡು ಕಿತ್ತೂರಿನಿಂದ ಬೈಲಹೊಂಗಲಕ್ಕೆ ತೆರಳಬೇಕಾದರೆ ಅಂತರ ೪೦ಕಿಮೀ. ಇದ್ದು ಹೋಗಿಬರಲು ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಾನೂಕೂಲವಿದ್ದು ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲು ಆಗುತ್ತಿಲ್ಲ. ಆದಕಾರಣದಿಂದ ಎಲ್ಲಾ ಗ್ರಾಪಂ ಪುನರ್ ವಸತಿ ಕಾರ್ಯಕರ್ತರಿಗೆ ತೊಂದರೆಯಾಗುವುದರಿAದ ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಚಿವರು, ಸ್ಥಳೀಯ ಶಾಸಕರು, ಜಿಪಂ ಮುಖ್ಯನಿರ್ವಾಹಕ ಕಾರ್ಯಕಾರಿ ಅಧಿಕಾರಿ ಹಾಗೂ ಮೇಲಾಧಿಕಾರಿಗಳು ಗಮನಹರಿಸಿ ತಾಪಂ ಕಿತ್ತೂರಿನಲ್ಲಿ ವಿವಿಧ್ಯೋದ್ದೇಶ ಪುನರ್ ವಸತಿ ಕಾರ್ಯಕರ್ತರನ್ನು ಶೀಘ್ರವೇ ನೇಮಕ ಮಾಡಿ ತಾಪಂದಲ್ಲಿ ಸ್ಥಳಾವಕಾಶ ನೀಡಿ ಇಲ್ಲಿ ಕಾರ್ಯನಿರ್ವಹಿಸಲು ಅನುಕೂಲು ಮಾಡಿ ಕೊಡಬೇಕೆಂದು ಮನವಿ ಪತ್ರದ ಮೂಲಕ ತಿಳಿಸಲಾಯಿತು.


ಮನವಿ ಸ್ವೀಕರಿಸಿ ಮಾತನಾಡಿದ ವಿಜಯ ಪಾಟೀಲ ಅವರು ನಿಮ್ಮ ಮನವಿಯನ್ನು ಮೇಲಾಧಿಕಾರಿ ಗಮನಕ್ಕೆ ತರಲಾಗುವುದೆಂದರು.
ಈ ವೇಳೆ ತಾಪಂ ಸಹಾಯಕ ಅಧಿಕಾರಿಗಳಾದ ಲಿಂಗರಾಜ ಹಲಕರ್ಣಿಮಠ, ನಾಗಪ್ಪ ಕಳ್ಳಿಮನಿ, ೧೭ ಗ್ರಾಪಂ ಪುನರ್ ವಸತಿ ಕಾರ್ಯಕರ್ತರು ಇತರರಿದ್ದರು.