
ಕಲಬುರಗಿ:ಮಾ.3: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಬಳ್ಳಾರಿ, ಕೊಪ್ಪಳ, ಈ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಬಿಸಿಲಿನ ತಾಪಮಾನ ಇರುವುದರಿಂದ ಕಲಬುರಗಿ ನಗರದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ವಿನಾಯಿತಿ ನೀಡಬೇಕೆಂದು ಕರವೇ(ಕಾವಲುಪಡೆ) ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಲವಾರಕರ್ ಅವರು ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಈ ಕುರಿತು ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಕಲಬುರಗಿ,ಬೀದರ,ಯಾದಗಿರಿ,ರಾಯಚೂರು,ಬಳ್ಳಾರಿ, ಕೊಪ್ಪಳ ಈ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಬಿಸಿಲಿನ ತಾಪಮಾನ ಇರುವುದರಿಂದ ಕಲಬುರಗಿ ನಗರದಲ್ಲಿ ದ್ವಿ-ಚಕ್ರವಾಹನ ಸಾವರರಿಗೆ ಹೆಲ್ಮೆಟ ಕಡ್ಡಾಯದ ವಿನಾಯಿತಿಯನ್ನು ಮಾರ್ಚದಿಂದ ಜೂನ್ ತಿಂಗಳವರೆಗೆ ಹೆಲ್ಮೆಟ್ ಕಡ್ಡಾಯಕ್ಕೆ ವಿನಾಯಿತಿ ನೀಡುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಕಲಬುರಗಿ ಪೆÇಲೀಸ್ ಆಯುಕ್ತರಿಗೆ ಸೂಕ್ತವಾದ ನಿರ್ದೇಶನವನ್ನು ನೀಡಬೇಕೆಂದು ಅವರು ಮನವಿ ಮಾಡಿಕೊಂಡರು.



























