
ಕಲಬುರಗಿ,ಫೆ.22-ಮಾರ್ಚ್ 6 ರಂದು ನಡೆಯುವ ಬಜೆಟ್‍ನಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿಸಿಯೂಟ ನೌಕರರ ಹಾಗೂ ಆಶಾ ಕಾರ್ಯಕರ್ತರಿಗೆ ಪ್ರತಿ ತಿಂಗಳಿಗೆ 10 ಸಾವಿರ ರೂ.ಗೌರವ ಧನ ಹೆಚ್ಚಿಸಬೇಕು ಎಂದು ಕರ್ನಾಟಕ ಸಮತಾ ಸೈನಿಕದಳ ಮನವಿ ಮಾಡಿದೆ.
ಈ ಸಂಬಂಧ ಸಮಿತಿ ರಾಜ್ಯ ಉಪಾಧ್ಯಕ್ಷ ಸಂಜೀವ ಟಿ.ಮಾಲೆ, ಜಿಲ್ಲಾ ಅಧ್ಯಕ್ಷ ಈರಣ್ಣಾ ಜಾನೆ, ಮಹಿಳಾ ಘಟಕದ ಅಧ್ಯಕ್ಷೆ ಶಿವಲಿಂಗಮ್ಮ ಸಾವಳಗಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬಿಸಿಯೂಟ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಉದಯಕುಮಾರ ಉದ್ದಾ, ಮಲ್ಲಮ್ಮ ಜಗತಿ, ಮಹಾದೇವ ನಾಟೀಕಾರ, ಶರಣು ಕಡಗಂಚಿ, ಮಿಲಿಂದ ಕಣಮಸ್, ಇಂದುಮತಿ ಭರತನೂರ, ಶರಣು ಮುದ್ನಾಳಕರ, ಖತಲಪ್ಪ ಕಟ್ಟಿಮನಿ, ಮಲ್ಲು ನಂದೂರ, ಸಿದ್ಧಾರ್ಥ ಕಣಮಸ, ಶಿವಮೂತಿ ಬಳಿಚಕ್ರ, ಸೂರ್ಯಕಾಂತ ಅಂಬಲಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



























