
ಕಲಬುರಗಿ,ಫೆ 20: ಉದನೂರ ಹಿರೇಗೌಡ ಲೇಔಟ್‍ನಲ್ಲಿರುವ ಅಪ್ಪಾಜಿ ಶಿಕ್ಷಣ ಟ್ರಸ್ಟ್‍ನ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಸಾಂಸ್ಕøತಿಕ ಉತ್ಸವ ಹಾಗೂ ಅಪ್ಪಾಜಿ ಗುರು ಸೇವಾ ಭಾಗ್ಯ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಫೆ.22ರಂದು ಸಂಜೆ 5ಕ್ಕೆ ನಡೆಯಲಿದೆ ಎಂದು ಸಂಸ್ಥೆ ಕಾರ್ಯದರ್ಶಿ ರಾಜಕುಮಾರ ಬಿರಾದಾರ ಅವರುತಿಳಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಎಸಿಪಿ ಶರಣಬಸವೇಶ್ವರ ಹೀರಾ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಿದ್ಧಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಸಯ್ಯ ಮಠಪತಿ, ಆರಕ್ಷಕ ನಿರೀಕ್ಷಕ ರಾಘವೇಂದ್ರ ಭಜಂತ್ರಿ, ಪೆÇಲೀಸ್ ನಿರೀಕ್ಷಕ ಮಹಾದೇವ ಪಾಟೀಲ್, ದಿಶಾ ಕಾಲೇಜಿನ ವ್ಯವಸ್ಥಾಪಕ ಮುಖ್ಯಸ್ಥ ಶಿವಾನಂದ ಖಜೂರಿ, ಪತ್ರಕರ್ತ ಜಯತೀರ್ಥ ಪಾಟೀಲ್ ಭಾಗವಹಿಸಲಿದ್ದು, ಉದ್ಯಮಿ ಶರಣಬಸಪ್ಪ ಬಿ.ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಗಮ್ಮ ರಾಜಕುಮಾರ್,ಶರಣಬಸಪ್ಪ ಮಾಲಿ ಪಾಟೀಲ್,ಬಸವರಾಜ ಬಿರಾದಾರ,ಅಭಿಲಾಷ ಜಿಡಗಿ ಉಪಸ್ಥಿತರಿದ್ದರು
ಗುರು ಸೇವಾ ಭಾಗ್ಯ ಪ್ರಶಸ್ತಿ ಪುರಸ್ಕøತರು
ಕಳೆದ ಆರು ವರ್ಷಗಳಿಂದ ಶಿವಯೋಗಿ ಸಿದ್ದರಾಮೇಶ್ವರರಿಗೆ ಸೇವೆಗೈದ ಭಕ್ತರಿಗೆ ಅಪ್ಪಾಜಿ ಗುರುಸೇವಾ ಭಾಗ್ಯ ರಾಷ್ಟ್ರಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂಧ್ರದಲ್ಲೂ ಶ್ರೀಗಳ ಸೇವಕರಿದ್ದು, ಅವರನ್ನು ಗುರುತಿಸಿ ಗುರುಭಕ್ತಿ ಅರ್ಪಿಸಲು ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಪ್ರಸಕ್ತ ವರ್ಷ ಸುಮಂಗಲಾ ಪಾಟೀಲ್, ಸಿದ್ದರಾಮ ಯಾದವಾಡ, ಅಣ್ಣಪ್ಪ ನಾವಿ, ಶರಣಬಸಪ್ಪ ಸಲಗರ ಹಾಗೂ ದಿ.ಶ್ರೀಮಂತರಾವ ಪಾಟೀಲ್ ಅವರ ಕುಟುಂಬದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು

























