
ಕಲಬುರಗಿ,ಜು.17: ಎಪಿಎಂಸಿಯಲ್ಲಿ ಅನಧಿಕೃತ ಅಂಗಡಿಗಳ ತೆರವಿಗಾಗಿ ಹಾಗೂ ಕೃಷಿ ಮಾರುಕಟ್ಟೆ ಹಗರಣ ಸಿಬಿಐ ತನಿಖೆಗೆ ಆಗ್ರಹಿಸಿ ಜು.22 ರಿಂದ ಬೆಂಗಳೂರಿನ ರಾಜ್ಯಪಾಲರ ಭವನವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.
ಎಪಿಎಂಸಿ ಅನಧಿಕೃತ ಅಂಗಡಿ ತೆರವು ಹೋರಾಟದ ಅನಿರ್ದಿಷ್ಠಾವಧಿ ಧರಣಿ ಜುಲೈ 21ಕ್ಕೆ ಎರಡು ತಿಂಗಳು ಮುಗಿದು ಮೂರನೆ ತಿಂಗಳು ಪಾರಂಭವಾಗುತ್ತದೆ. ಹಾಗಾಗಿ ಜುಲೈ 22 ರಿಂದ ಬೆಂಗಳೂರಿಗೆ ಸೈಕಲ್ ಜಾಥಾ ಮುಖಾಂತರ ರಾಜ್ಯದ ರಾಜ್ಯಪಾಲರ ಮನೆವರೆಗೆ ತೆರಳುತ್ತೇವೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಹಗರಣಕ್ಕೆ ಇತಿಶ್ರೀ ಹಾ ಡಬೇಕೆಂದು ಮನವಿ ಮಾಡಿ ಬೆಂಗಳೂರಿನ ಕೃಷಿ ಮಾರುಕಟ್ಟೆ ಮಹಾಮಂಡಳಿ ಕಛೇರಿ ಎದುರು ಬೆಂಗಳೂರಿನ ಹಲವಾರು ಸಂಘಟನೆಗಳ ಬೆಂಬಲದೊಂದಿಗೆ ಅನಿರ್ದಿಷ್ಠÀ ಧರಣಿ ಆರಂಭಿಸುತ್ತೇನೆ ಎಂದು ನರಿಬೋಳ ತಿಳಿಸಿದ್ದಾರೆ