Home ಕ್ರೀಡೆ ಅಂತರರಾಷ್ಟ್ರೀಯ ಕ್ರೀಡಾಕೂಟ: ಬೀದರ್ ಪ್ರತಿಭೆಗೆ ಮೂರು ಪದಕ

ಅಂತರರಾಷ್ಟ್ರೀಯ ಕ್ರೀಡಾಕೂಟ: ಬೀದರ್ ಪ್ರತಿಭೆಗೆ ಮೂರು ಪದಕ

ಬೀದರ್: ಮಾ.13:ಇಲ್ಲಿಯ ಜಿಲ್ಲಾ ಕಾರಾಗೃಹದ ವೀಕ್ಷಕಿ ಮಮಿತಾಬಾಯಿ ಕದ್ರೆ ಅವರು ಥೈಲ್ಯಾಂಡ್‍ನ ರಾಚಬುರಿಯಲ್ಲಿ ನಡೆದ 30ನೇ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಜಯಿಸಿ ಸಾಧನೆಗೈದಿದ್ದಾರೆ.
40 ವರ್ಷ ಮೇಲ್ಪಟ್ಟವರ ವಿಭಾಗದ 4 * 100 ಮಿಕ್ಸ್ ರಿಲೆದಲ್ಲಿ ಚಿನ್ನ, 4 * 400 ರಿಲೆದಲ್ಲಿ ಬೆಳ್ಳಿ ಹಾಗೂ ವೈಯಕ್ತಿಕ ವಿಭಾಗದ 5 ಕಿ.ಮೀ. ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕ್ರೀಡಾಕೂಟದಲ್ಲಿ 10 ದೇಶಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಮಮಿತಾಬಾಯಿ ಕಾರಾಗೃಹ ವೀಕ್ಷಕಿ ವೃತ್ತಿ ಜತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಉತ್ತಮ ಕ್ರೀಡಾಪಟು ಆಗಿರುವ ಅವರು, ವಿವಿಧ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆಗೈದು ಗಮನ ಸೆಳೆದಿದ್ದಾರೆ.
ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೂರು ಪದಕ ಬಂದಿರುವುದು ಸಂತಸ ಉಂಟು ಮಾಡಿದೆ. ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಥೈಲ್ಯಾಂಡ್‍ನ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಕೊಡುವ ಮೂಲಕ ಪೆÇ್ರೀತ್ಸಾಹಿಸಿದ್ದಾರೆ ಎಂದು ಮಮಿತಾಬಾಯಿ ಕದ್ರೆ ತಿಳಿಸಿದರು.
ಮಮಿತಾಬಾಯಿ ಅವರ ಸಾಧನೆಗೆ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.