
ಕಲಬುರಗಿ,ಫೆ.22-ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಸಂಘದ ಕಾರ್ಯಾಲಯದಲ್ಲಿ ಅಪ್ಪಾರಾವ ಅಕ್ಕೋಣೆಯವರು ಬರೆದ “ಸಂತೃಪ್ತ”ಎಂಬ ಆತ್ಮ ಕಥನ ಪುಸ್ತಕದ ಕುರಿತು ಅವಲೋಕನ ಕಾರ್ಯಕ್ರಮ ಜರುಗಿತು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಸಂಗನಗೌಡ ಹಿರೇಗೌಡ ಅವರು ಪುಸ್ತಕದ ಕುರಿತು ಸಂತೃಪ್ತ ಪುಸ್ತಕ ಓದಿದಾಗ ಅಕ್ಕೋಣೆಯವರದು ಜ್ಞಾನದ ಹಸಿವು ನೀಗಿಸಲು ಕಲಬುರ್ಗಿಗೆ ಬಂದರು, ಅವರದ್ದು ಗುರಿ ಮತ್ತು ಗುರು ಇಲ್ಲದ ಪಯಣವಾಗಿತ್ತು. ಅವರು ಎಂದು ಗೆಲವು ಬಯಸಿ ಹೋದವರಲ್ಲ, ಅವರಿಗೆ ಸ್ನೇಹಿತರ ಸಹಕಾರದಿಂದ ಜೀವನಲ್ಲಿ ಮೇಲೆ ಬಂದರು, ಅದರಲ್ಲಿ ಅವರ ಹೆಂಡತಿಯ ತ್ಯಾಗವೂ ಕೂಡಿದೆ .ಸಂತೃಪ್ತ ಆತ್ಮಕಥನದಲ್ಲಿ ಗಂಭೀರತೆಯ ವ್ಯಕ್ತಿತ್ವ ಅಡಗಿದೆ, ಅಕ್ಕೋಣೆಯವರಲ್ಲಿ ಇರುವ ಶಿಸ್ತು, ಬದ್ಧತೆ ಮತ್ತು ಅವರ ಸಕರಾತ್ಮಕತೆಯ ಗುಣವು ಎಲ್ಲರ ಹೃದಯ ಗೆಲ್ಲುವದರಲ್ಲಿ ಸಫಲರಾಗಿದ್ದಾರೆ. ಅವರ ಬದುಕಿನಲ್ಲಿ ಬರುವ ರಕ್ತಸಂಬಂಧಿಕರ ಸಾವು, ನೋವು ಅರಗಿಸಿಕೊಂಡು ಮುಂದುವರಿದಿದ್ದಾರೆ. ಈ ಪುಸ್ತಕವನ್ನು ಓದಿದಾಗ ಯಾವುದೇ ತರಹದ ತಂತ್ರವನ್ನು ಬಳಸದೆ, ಅವರ ಜೀವನದಲ್ಲಿ ಬರುವ ಸಂಗತಿಗಳು ಮತ್ತು ಘಟನೆಗಳ ಮಾಹಿತಿಯನ್ನು ಯಥಾವತ್ತಾಗಿ ಹಿಡಿದಿಟ್ಟಿದ್ದಾರೆ” ಎಂದರು.
ಹಿರಿಯ ಸಾಹಿತಿಗಳಾದ ಡಾ. ಶ್ರೀಶೈಲ ನಾಗರಾಳ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಲೇಖಕರಾದ ಅಪ್ಪಾರಾವ ಅಕ್ಕೋಣೆಯವರು ಮಾತನಾಡುತ್ತ “ನನ್ನ ಜೀವನಲ್ಲಿ ಏನಾದರು ನಾನು ಸಮಾಜದ ಸೇವೆ ಮಾಡಿದೆನೆಂದರೆ ಅದಕ್ಕೆ ನನ್ನ ಅಪ್ಪ ಅಮ್ಮ ಮತ್ತು ಸಹೋದರ ಅಮೃತ ಕಾರಣರು. ನನ್ನ ಗೆಳೆಯರು ಮತ್ತು ಶಿಕ್ಷಕರು ನನಗೆ ಸಹಾಯ ಮಾಡಿದರು ಎಂದರು, ಅವರು ಮುಂದುವರಿದು ನಾನು ಎಂದು ನನ್ನ ಸ್ವಾಭಿಮಾನ ಬಿಟ್ಟು ನಡೆದವನಲ್ಲ” ಎಂದರು. ಡಾ.ವಿಜಯಕುಮಾರ ಪರುತೆಯವರು ಕಾರ್ಯಕ್ರಮವನ್ನು ನಿರುಪಿಸಿದರು. ಪೆÇ್ರ.ಕೆ.ವಿಶ್ವನಾಥ, ಸೂರ್ಯಕಾಂತ ಸೊನ್ನದ, ಪೆÇ್ರ.ಎಸ್.ಎಲ್.ಪಾಟೀಲ್, ಡಾ.ಶರಣಬಸಪ್ಪ ವಡ್ಡನಕೇರಿ, ಸಿದ್ಧರಾಮ ಸರಸಂಬಿ, ಡಾ. ಎಸ್. ಎಮ್. ಮಠ, ಗಂಗಾಧರ ಪಾಟೀಲ್, ಡಾ. ಗವಿಸಿದ್ಧಪ್ಪ ಪಾಟೀಲ್, ರೇವಣಸಿದ್ಧಪ್ಪ ದುಕಾನ, ಸುಭಾಶ್ಚಂದ್ರ ಕಶೆಟ್ಟಿ, ಶಿವಾನಂದ ಕಶೆಟ್ಟಿ, ಎಸ್. ಎಸ್. ಪಾಟೀಲ್,ಡಾ. ರಾಜಕುಮಾರ ಮಾಳಗೆ ಮತ್ತು ವೀರಭದ್ರಪ್ಪ ಗುರಮಿಠಕಲ್ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.



























