Home ಜಿಲ್ಲೆ ಕಲಬುರಗಿ ಅಮೆರಿಕಾ ವಿಶ್ವವಿದ್ಯಾಲಯದಿಂದ ಅಮೋಘ ಸಿರನೂರಕರ್ ಗೆ ಪ್ರಶಸ್ತಿ

ಅಮೆರಿಕಾ ವಿಶ್ವವಿದ್ಯಾಲಯದಿಂದ ಅಮೋಘ ಸಿರನೂರಕರ್ ಗೆ ಪ್ರಶಸ್ತಿ

ಕಲಬುರಗಿ: ಅಮೆರಿಕಾದ ಪಡ್ರ್ಯೂ ವಿಶ್ವವಿದ್ಯಾಲಯವು ಡಾ.ಅಮೋಘ ಸಿರನೂರಕರ್ ಅವರನ್ನು ಪೆÇೀಸ್ಟ್ ಡಾಕ್ಟೋರಲ್ ಟಾಪ್ ಮೆಂಟರ್ (ಪಿಹೆಚ್.ಡಿ.ಪದವಿಯೋತ್ತರ ಶ್ರೇಷ್ಠ ಗುರು) ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇದೇ ವರ್ಷ, ಅಂದರೆ 2026 ರಲ್ಲಿ ಆರಂಭಿಸಲಾದ ಈ ಪ್ರತಿಷ್ಠಿತ ಪ್ರಶಸ್ತಿಗೆ ಅಮೋಘನನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಒಂದೂವರೆ ಸಾವಿರ ಡಾಲರ್ ನಗದು, ಪ್ರಶಸ್ತಿ ಪತ್ರ ಒಳಗೊಂಡಿರುವ ಪ್ರಶಸ್ತಿಯನ್ನು ಎಪ್ರಿಲ್ 22 ರಂದು ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು .
ಅಮೆರಿಕಾದ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಮೊದಲ ಸ್ಥಾನದಲ್ಲಿರುವ ಪಡ್ರ್ಯೂ ವಿಶ್ವವಿದ್ಯಾಲಯದ 14 ತೀರ್ಪುಗಾರರ ಮಂಡಳಿ ಅಮೋಘನನ್ನು ಆಯ್ಕೆ ಮಾಡಿದೆ.
ಕಲಬುರಗಿಯ ಎಸ್.ಬಿ.ವಿಜ್ಞಾನ ಮಹಾವಿದ್ಯಾಲಯದಿಂದ ಬಿಎಸ್.ಸಿ. ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಎಮ್.ಎಸ್ಸಿ. (ಭೌತಶಾಸ್ತ್ರ) ಸ್ನಾತಕೋತ್ತರ ಪದವಿ ನಂತರ ಅಮೆರಿಕಾದ ಕಾನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯದಿಂದ ಪಿಹೆಚ್. ಡಿ. ಪೂರೈಸಿದ್ದಾನೆ. ನಂತರ ಪಡ್ರ್ಯೂ ವಿಶ್ವವಿದ್ಯಾಲಯದಿಂದ ಪೆÇೀಸ್ಟ್ ಡಾಕ್ಟೋರಲ್ ಸಂಪನ್ನಗೊಳಿಸಿದ್ದಾನೆ.