ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ ಮೇಘಾಲಯ ಭೇಟಿ

ಕಲಬುರಗಿ,ಸೆ.5-ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಉದ್ಯಮಗಳ ಸಮಿತಿಯು ಸಮಿತಿಯಲ್ಲಿರುವ ಕಲಬುರಗಿ ದಕ್ಷಿಣ ಶಾಸಕÀ ಅಲ್ಲಮಪ್ರಭು ಪಾಟೀಲ್, ಅಫಜಲಪುರ ಶಾಸಕ ಎಂ.ವೈ.ಪಾಟೀಲ ಸಮಿತಿ ಅಧ್ಯಕ್ಷ ಬಸವರಾಜ ನೀಲಪ್ಪ ಶಿವಣ್ಣನವರ್ ಮತ್ತು ಸಮಿತಿ ಸದಸ್ಯರಾದ ಆರಗ ಜ್ಞಾನೇಂದ್ರ, ಉಮಾಶ್ರೀ ಹಾಗೂ ಭಾರತಿಶೆಟ್ಟಿ ಅವರನ್ನು ಒಳಗೊಂಡ ತಂಡ ಮೇಘಾಲಯ ವಿಧಾನಸಭೆಯ ಸಭಾಧ್ಯಕ್ಷರಾದ ಥಾಮಸ್ ಎ.ಸಂಗ್ಮಾ ಮತ್ತು ಉಪಸಭಾಧ್ಯಕ್ಷರಾದ ಟಿ.ಡಿ.ಶಿರ ಅವರನ್ನು ಭೇಟಿ ಮಾಡಿತು.
ಇದೇ ಸಂದರ್ಭದಲ್ಲಿ ಮೇಘಾಲಯದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಕಾರ್ಯವಿಧಾನದ ಬಗ್ಗೆ ಮತ್ತು ಮೇಘಾಲಯದ ವಿವಿಧ ವಲಯಗಳ ವಿದ್ಯಮಾನಗಳ ಬಗ್ಗೆ ಸಮಿತಿ ಅವರೊಂದಿಗೆ ಚರ್ಚಿಸಿತು.
ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಉಪಕಾರ್ಯದರ್ಶಿಯವರು ಸಮಿತಿಯ ಕಾರ್ಯವಿಧಾನ ಮತ್ತು ವಿಧಾನಸಭೆಯ ಕಾರ್ಯವಿಧಾನದ ನಿಯಮಗಳ ಪುಸ್ತಕಗಳನ್ನು ಮೇಘಾಲಯ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರು.