
ಬೆಂಗಳೂರು, ಮಾ. ೩೦- ಬೆಂಗಳೂರು ಕರಗ ಏಪ್ರಿಲ್ ೧ ರಂದು ನಡೆಯಲಿದ್ದು, ಇದಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರಿಗೂ ಕರಗದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಕರಗವನ್ನು ಹೆಚ್ಚು ಆಕರ್ಷಕವಾಗಿ ಹಾಗೂ ಯಾವುದೇ ತೊಂದರೆಗಳಾಗದಂತೆ ಮಾಡಲು ಕ್ರಮ ವಹಿಸಿದ್ದೇವೆ. ಕರಗ ಅಂಗವಾಗಿ ಬೆಂಗಲೂರು ನಗರದ ಪ್ರಮುಖ ಹಾಗೂ ಐತಿಹಾಸಿಕ ಮಂದಿರ ಮತ್ತು ಕಟ್ಟಡಗಳಿಗೆ ವಿಧ ವಿಧವಾದ ದೀಪಾಲಂಕಾರ ಮಾಡಲಾಗಿದೆ ಎಂದರು
ಬೆಂಗಳೂರು ಕರಗವನ್ನು ರಾಜ್ಯದಷ್ಟೇ ಅಲ್ಲದೆ ಬೇರೆ ಜಿಲ್ಲೆಯವರು ನೋಡುವಂತೆ ವ್ಯವಸ್ಥೆ ಮಾಡಿದ್ದೇವೆ. ಸಂಚಾರ ದಟ್ಟಣೆಯಾಗದಂತೆಯೂ ಕ್ರಮ ವಹಿಸಲಾಗಿದೆ. ೨೪ ಗಂಟೆಯೂ ಕಸ ವಿಲೇವಾರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬಸವಗುಡಿಯ ಕಡಲೆಕಾಯಿ ಪರಿಷೆಯನ್ನು ಐದು ದಿನಗಳು ಮಾಡಿದ್ದೇವು. ವ್ಯಾಪಕ ಪ್ರಚಾರ ಕೊಟ್ಟಿದ್ದೇವು.. ಕಡಲೆಕಾಯಿ ಪರಿಷೆಗೆ ಸುಮಾರು ೧೫ ಲಕ್ಷ ಜನ ಬಂದಿದ್ದರು. ಬೆಂಗಳೂರು ಕರಗಕ್ಕೂ ಹೆಚ್ಚಿನ ಜನ ಬರುವಂತೆ ಎಲ್ಲ ರೀತಿಯ ವ್ಯಾಪಕ ಸಿದ್ಧತೆಗಳನ್ನು ಮಾಡಲಾಗಿದೆ. ಕರಗಕ್ಕೆ ೯೦೦ ವರ್ಷಗಳ ಇತಿಹಾಸವಿದೆ ಎಂದರು.
ಪಾಲಿಕೆ ಬಜೆಟ್‌ನಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಅವಲಂಬನೆ ಇದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಮೊದಲಿನಿಂದಲೂ ಹಾಗೆಯೇ ಇದೆ. ಪಾಲಿಕೆಗಳಿಗೆ ಕಡಿಮೆಯಾಗುವ ಹಣವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಿದರು.
ಮುಸ್ಲಿಂ ಸಮುದಾಯದವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ರಾಜ್ಯಸಭೆ ಮತ್ತು ವಿಧಾನಪರಿಷತ್ ಸ್ಥಾನ ಕೊಡುತ್ತದೆ ಎಂದು ಹೇಳಿದರು.
ರಾಜ್ಯ ರಸ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಸದ್ಯ ಯಾವುದೇ ಡಿಸೇಲ್ ಸಮಸ್ಯೆ ಆಗಿಲ್ಲ. ಯುದ್ಧ ಹೀಗೆ ಮುಂದುವರೆದರೆ ಮುಂದೆ ಏನಾದರೂ ಸಮಸ್ಯೆ ಆಗಬಹುದೇನೋ, ತಕ್ಷಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.































