ವೈಷ್ಣವ ಸಮಾಜದ ಬಾಂಧವರೆಲ್ಲರೂ ಕನ್ನಡವನ್ನು ಕಲಿಯಬೇಕು :ಸಚಿವ ಶಿವಾನಂದ್ ಪಾಟೀಲ್

ಬಸವನಬಾಗೇವಾಡಿ: ಅ.೩೧:ಪಟ್ಟಣದ ವೈಷ್ಣವ ಸಮಾಜದ ಬಾಂಧವರು ಹಮ್ಮಿಕೊಂಡ ಬಾಬಾ ರಾಮ್ ದೇವಜಿ ಅವರ ಜಾಗರಣ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ್ ಪಾಟೀಲ್ ಮಾತನಾಡಿ ವೈಷ್ಣವ ಸಮಾಜದ ಬಾಂಧವರು ಕರ್ನಾಟಕಕ್ಕೆ ಬಂದು ಇಲ್ಲಿ ನೆಲಸಿ ೧೦ ರಿಂದ ೧೫ ವರ್ಷಗಳಾದ ಇಲ್ಲಿ ವ್ಯಾಪಾರ ವಹಿವಾಟ ಮಾಡುವುದರಿಂದ ತಾವು ಕನ್ನಡ ಕಲಿಯಬೇಕು ಅಂದರೆ ವ್ಯಾಪಾರ ಮಾಡಲು ತಮಗೆ ಸುಗಮವಾಗುವುದು ಎಂದರು ಪಟ್ಟಣದ ಬಸವ ಭವನದಲ್ಲಿ ಹಮ್ಮಿಕೊಂಡ ಬಾಬಾ ರಾಮ್ ದೇವಾಜಿ ಅವರ ಜಾಗರಣ ಕಾರ್ಯಕ್ರಮ ನಡೆಯಿತು ಸಚಿವರು ಮಾತನಾಡಿ ಪ್ರತಿ ವರ್ಷಕ್ಕಿಂತ ಈ ವರ್ಷವೂ ಮಳೆ ಮತ್ತು ಬೆಳೆ ಚೆನ್ನಾಗಿ ಆಗಿದೆ ಅಲ್ಲವೇ ನಾವೆಲ್ಲರೂ ಅಣ್ಣ ತಮ್ಮಂದಿರ ಹಾಗೆ ಬಾಳಬೇಕು ಈ ಸಮಾಜ ಬಾಂಧವರು ದೇವರ ಮೇಲೆ ಅಪಾರವಾದ ಭಕ್ತಿ ಭಾವ ಇರುವುದು ಕಂಡುಬರುತ್ತದೆ ಇವರು ದೇವರ ಮೇಲೆ ನಂಬಿಕೆ ಇಡುವಂತಹ ಜನ ಕಾರಣ ನಾವೆಲ್ಲರೂ ಆ ದೇವರಲ್ಲಿ ಸಂತೋಷದಿAದ ಸಹ ಬಾಳ್ವೆಯಿಂದ ಬಾಳೋಣ ಎಂದು ಪ್ರಾರ್ಥಿಸೋಣ ವೇದಿಕೆ ಮೇಲೆ ಸಾನಿಧ್ಯವನ್ನು ಮ ನಿ ಪ್ರ ಸಿದ್ದಲಿಂಗ ಸ್ವಾಮೀಜಿ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಲೋಕನಾಥ ಅಗರ್ವಾಲ್ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಜನತಾ ಬಜಾರ್ ಅಧ್ಯಕ್ಷರಾದ ಬಾಲಚಂದ್ರ ಮುಂಜಾನೆ ಸತ್ಯನಾರಾಯಣ ಅಗರವಾಲ್ ಭರತ್ ಅಗರ್ವಾಲ್ ಗೋಪಾಲ್ ಅಗರ್ವಾಲ್ ಬಸವೇಶ್ವರ ಶುಭ ಸಮಿತಿಯ ನಿರ್ದೇಶಕರಾದ ಸಂಗಣ್ಣ ಕಲ್ಲೂರ ಸಂಕನಗೌಡ ಪಾಟೀಲ ನ್ಯಾಯವಾದಿ ರವಿ ರಾಠೋಡ್ ಕಾರ್ಯಕ್ರಮ ಸ್ವಾಗತ ಮತ್ತು ನಿರೂಪಣೆ ಶ್ರೀ ಎಮ್ ಬಿ ತೋಟದ ಶಿಕ್ಷಕರು ನಡೆಸಿಕೊಟ್ಟರು