Home ಜಿಲ್ಲೆ ಕಲಬುರಗಿ ಜಾತಿ ವ್ಯವಸ್ಥೆ, ಕಂದಾಚಾರದ ವಿರುದ್ಧ ಹೋರಾಡಿದ ಮಹಿಳೆ ಅಕ್ಕಮಹಾದೇವಿ

ಜಾತಿ ವ್ಯವಸ್ಥೆ, ಕಂದಾಚಾರದ ವಿರುದ್ಧ ಹೋರಾಡಿದ ಮಹಿಳೆ ಅಕ್ಕಮಹಾದೇವಿ

ಜೇವರಗಿ,ಏ.3: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ, ಪಟ್ಟಣದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತೋತ್ಸವದ ನಿಮಿತ್ಯ ಕದಳಿ ಮಹಿಳಾ ಸಮಾವೇಶ ಕಾರ್ಯಕ್ರಮವು ಅಗ್ನಿಶಾಮಕ ಎದುರುಗಡೆ ಶಹಾಪುರ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಜರುಗಿತು.ರೇಣುಕಾಚಾರ್ಯರ ದೇವಸ್ಥಾನದಿಂದ ಕಾರ್ಯಕ್ರಮದ ವೇದಿಕೆಯ ವರೆಗೆ ಶಿವಶರಣೆ ಅಕ್ಕಮಹಾದೇವಿಯವರ ಭಾವಚಿತ್ರದ ಮೆರವಣಿಗೆ ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶಕಾಪುರ ವಿಶ್ವರಾಧ್ಯರ ತಪೆÇೀವನ ಮಠದ ಡಾ. ಸಿದ್ದರಾಮ ಶಿವಾಚಾರ್ಯರು , ನೆಲೋಗಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಂಭುಲಿಂಗ ದೇಸಾಯಿ, ಷಣ್ಮುಖಪ್ಪ ಸಾಹು ಗೋಗಿ ಪಾಲ್ಗೊಂಡರು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಲ್ಲಮ್ಮ ನೀಲಕಂಠ ಹಳಿಮನಿ ಉಪಸ್ಥಿತರಿದ್ದರು., ಆಶಯ ನುಡಿಗಳನ್ನು ಕಾವ್ಯಶ್ರೀ ಮಹಾಗಾಂವಕಾರ್, ಪ್ರಾಥಮಿಕ ಭಾಷಣವನ್ನು ಮಲ್ಲಿಕಾರ್ಜುನ್ ವಡ್ಡನಕೇರಿ ಅಧ್ಯಕ್ಷತೆಯನ್ನು ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಡಾ. ಶಾಂತ ಬಿ ಅಷ್ಟಗೆ ವಹಿಸಿದ್ದರು.ನಂತರ ವೇದಿಕೆಯಲ್ಲಿ ಅಕ್ಕ ಪ್ರಶಸ್ತಿಯನ್ನು ಮಾಜಿಸಚಿವೆ ಡಾ. ಲೀಲಾದೇವಿ ಆರ್ ಪ್ರಸಾದ್, ಹಾಗೂ ಕಲಬುರಗಿಯ ಕದಳಿ ಸಿರಿ ಆಸ್ಪತ್ರೆ ಮುಖ್ಯಸ್ಥೆ ಡಾ.ಭಾಗ್ಯಶ್ರೀ ಶರಣಪ್ರಕಾಶ್ ಪಾಟೀಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ಲೀಲಾದೇವಿ ಆರ್ ಪ್ರಸಾದ್ ಅವರು ಮಾತನಾಡಿ,ವಚನ ಸಾಹಿತ್ಯದ ಬೆಳಗು, ವೈರಾಗ್ಯ ಮೂರ್ತಿ, ಕನ್ನಡದ ಮೊದಲ ಕವಿಯತ್ರಿ, ಶಿವಶರಣೆ ಅಕ್ಕ ಮಹಾದೇವಿಯು ವೀರ ವೈರಾಗಿನಿಯಾಗಿ ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಕಂದಾಚಾರ ಜಾತಿ ವ್ಯವಸ್ಥೆ ಮೌಡ್ಯತೆಯ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಅಕ್ಕಮಹಾದೇವಿ ಎಂದರು.
ಶಿವಶರಣೆ ಅಕ್ಕಮಹಾದೇವಿಯವರ ರೂಪಕ ಪ್ರದರ್ಶನವನ್ನು ಕರ್ನಾಟಕ ಕಲಾ ಸಂಶೋಧನಾ ಅಕಾಡೆಮಿಯ ಜೇವರ್ಗಿ ವಿದ್ಯಾರ್ಥಿನಿ ಅಕ್ಷರಾ ರೆಡ್ಡಿ ಯವರು ಮನಮುಟ್ಟುವಂತೆ ಪ್ರದರ್ಶನ ನೀಡಿದರು.
ಅದ್ದೂರಿ ಮೆರವಣಿಗೆ ಹಾಗೂ ವೇದಿಕೆಯ ಉದ್ಘಾಟನೆ ಕಾರ್ಯಕ್ರಮದ ನಂತರ ವಿಶೇಷ ಉಪನ್ಯಾಸ ಮಾಲಿಕೆ ಜರುಗಿತು. ಹಾಗೂ ಇದೇ ಸಂದರ್ಭದಲ್ಲಿ ಕದಳಿ ವೇದಿಕೆಯ ನೂತನ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಜನಾ ತಂಡಗಳ ಸದಸ್ಯರಿಗೆ ಗೌರವಿಸಲಾಯಿತು.
ಸಮಾರೋಪದಲ್ಲಿ ಉತ್ತರ ಕರ್ನಾಟಕದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ. ಶರಣು ಗದ್ದುಗೆ, ಶ್ರೀನಿವಾಸ ವಸಂತ ಕುಷ್ಟಗಿ ಭಾಗವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರಿಗೆ ಆಧ್ಯಾತ್ಮ ಜ್ಯೋತಿ , ಜ್ಞಾನಜ್ಯೋತಿ, ಬಸವ ಜ್ಯೋತಿ , ವಚನ ಸಾಹಿತ್ಯ ಸೇವಾ, ಮಹಿಳಾ ಸೇವಾ , ಶಿಶು ಸೇವಾ ರತ್ನ , ಕನ್ನಡ ತಂತ್ರಾಂಶ ಸೇವಾ , ಆಡಳಿತ ಸೇವಾ ರತ್ನ , ಕಲಾ ರತ್ನ. ಕನ್ನಡ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.