
ಕೋಲಾರ,ಜ,೧೬- ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವಕೀಲರ ಭವನ ಶಾಖೆ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಮಕರ ಸಂಕ್ರಾತಿ ಹಬ್ಬದಂದು ಗುರುವಾರ ಮುಂಜಾನೆ ೫ಗಂಟೆಗೆ ಅಗ್ನಿಹೋತ್ರ ಪೂಜಾ ಕಾರ್ಯಕ್ರಮವನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿ ರಾಜ್ಯ ಸಂಚಾಲಕ ಮಾರ್ಕೋಂಡಣ್ಣನವರು ನಡೆಸಿಕೊಟ್ಟರು.
ನಂತರ ಅವರು ಮಾತನಾಡಿ, ಅಗ್ನಿಹೋತ್ರ ಪೂಜಾ ಕಾರ್ಯಕ್ರಮ ವಿಧಾನ ಹಾಗೂ ಅದರ ಮಹತ್ವವನ್ನು ತಿಳಿಸಿದರು. ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸಲಿದ್ದು, ಅಗ್ನಿಹೋತ್ರ ಮಂತ್ರ ಪಠಿಸುವುದರಿಂದ ನಮ್ಮಲ್ಲಿರುವ ನಕರಾತ್ಮಕ ಚಿಂತನೆಗಳು ದೂರವಾಗಿ ಧನಾತ್ಮಕ ಚಿಂತನೆಗಳು ಹೆಚ್ಚಾಗುವುದು ಎಂದು ತಿಳಿಸಿದರು.
ಯೋಗಶಿಕ್ಷಕರಾದ ಶ್ರೀನಿವಾಸ್, ರವಿಕುಮಾರ್ ಅಣ್ಣನವರು ಮಾತನಾಡಿ, ರಥಸಪ್ತಮಿ ಪ್ರಯುಕ್ತ ಜ.೨೫ ರಂದು ಭಾನುವಾರ ನಗರದ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯೋಗ ಬಂಧುಗಳು ನಮ್ಮ ಎಲ್ಲಾ ಶಾಖೆಗಳಲ್ಲಿ ಇಂದಿನಿಂದ ನಡೆಯುವ ಪೂರ್ವಭಾವಿ ಯೋಗಾಭ್ಯಾಸಕ್ಕೆ ತಪ್ಪದೆ ಭಾಗವಹಿಸಿ ಸೂರ್ಯ ಭಗವಂತನ ಕೃಪೆಗೆ ಪಾತ್ರರಾಗಿ ಎಂದು ಹೇಳಿದರು.
ಅಗ್ನಿಹೋತ್ರ ಪೂಜಾ ಕಾರ್ಯಕ್ರಮದಲ್ಲಿ ಯೋಗ ಬಂಧುಗಳಾದ ಚಂದ್ರು, ಉಮಾಶಂಕರ್, ಮಂಜುನಾಥ್, ಆಶಾ, ರಾಮಮೂರ್ತಿ, ಮಂಜುಳ, ರಾಜೇಶ್, ವೆಂಕಟರಾi ಭಾಗವಹಿಸಿದ್ದರು.





























