ನಟ ಸತೀಶ್ ಶಾ ನಿಧನ: ಮೋದಿ, ಗಣ್ಯರ ಸಂತಾಪ


ಮುಂಬೈ,ಅ.೨೬-ಹಮ್ ಆಪ್ಕೆ ಹೈ ಕೌನ್,’ಮೈ ಹೂ ನಾ, ಕಲ್ ಹೋ ನಾ ಹೋ, ಓಂ ಶಾಂತಿ ಓಂ ನಂತಹ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಸತೀಶ್ ಶಾ, ಅಕ್ಟೋಬರ್ ೨೫, ೨೦೨೫ ರಂದು ತಮ್ಮ ೭೪ ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಸತೀಸ ಶಾ ನಿಧಾನಕ್ಕೆ ಪ್ರಧಾನಿ, ಬಾಲಿವುಡ್ ತಾರೆಯರು, ಟಿವಿ ಉದ್ಯಮ ಸಹೋದ್ಯೋಗಿಗಳು, ರಾಜಕಾರಣಿಗಳು , ಕ್ರೀಡಾಪಟುಗಳು ಅವರನ್ನು ಸ್ಮರಿಸಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗೌರವ-ಸಂತಾಪ -ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ವರದಿಗಳ ಪ್ರಕಾರ, ಸತೀಶ್ ಶಾ ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದು ಅವರು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಇಂದು ಮಧ್ಯಾಹ್ನ ೨.೩೦ ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ.

ತಮ್ಮ ಅಸಾಧಾರಣ ಹಾಸ್ಯ ಪ್ರಜ್ಞೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ.
ಸಾರಾಭಾಯಿ ವರ್ಸಸ್ ಸಾರಾಭಾಯಿ ಟಿವಿ ಧಾರಾವಾಹಿಯಲ್ಲಿನ ಇಂದ್ರವದನ್ ಸಾರಾಭಾಯಿ ಪಾತ್ರಕ್ಕಾಗಿ ಸತೀಶ್ ಶಾ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈ ಪಾತ್ರವನ್ನು ಭಾರತೀಯ ದೂರದರ್ಶನ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯ ಮತ್ತು ಜನಪ್ರಿಯ ಹಾಸ್ಯ ಪಾತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವರ ಹಾಸ್ಯ ಮತ್ತು ಶ್ರಮರಹಿತ ನಟನೆ ಯಾವಾಗಲೂ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ.

ಸತೀಶ್ ಶಾ ೧೯೮೪ ರಲ್ಲಿ ಜನಪ್ರಿಯ ಹಾಸ್ಯ ಧಾರಾವಾಹಿ ಯೇ ಜೋ ಹೈ ಜಿಂದಗಿ ಯಲ್ಲಿಯೂ ನಟಿಸಿದ್ದಾರೆ. ಆ ಕಾಲದ ಜನಪ್ರಿಯ ಕಾರ್ಯಕ್ರಮವಾಗಿತ್ತು ಮತ್ತು ಅದರ ಮೂಲಕ ಅವರು ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.

ಸತೀಶ್ ಶಾ ಕೇವಲ ದೂರದರ್ಶನಕ್ಕೆ ಸೀಮಿತವಾಗಿರಲಿಲ್ಲ. ಅವರು ಬಾಲಿವುಡ್‌ನಲ್ಲೂ ಹೆಸರು ಗಳಿಸಿದ್ದಾರೆ. ಅವರು ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.ಸತೀಶ್ ಶಾ ಭಾರತೀಯ ದೂರದರ್ಶನದ ಅತ್ಯಂತ ಪ್ರತಿಭಾನ್ವಿತ ಮತ್ತು ಬಹುಮುಖ ನಟರಲ್ಲಿ ಒಬ್ಬರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಸತೀಶ್ ಶಾ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರನ್ನು ಭಾರತೀಯ ಮನರಂಜನೆಯ ನಿಜವಾದ ದಂತಕಥೆ ಎಂದು ಸ್ಮರಿಸಲಾಗುತ್ತದೆ. ಅವರ ಸಹಜ -ಸುಲಲಿತ ಹಾಸ್ಯ ಮತ್ತು ಅಪ್ರತಿಮ ನಟನೆ ಅಸಂಖ್ಯಾತ ಜನರ ಜೀವನದಲ್ಲಿ ನಗುವನ್ನು ತಂದವು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಬರೆದಿದ್ದಾರೆ.

ಭೂತ್ನಾಥ್ ಚಿತ್ರದಲ್ಲಿ ಸತೀಶ್ ಶಾ ಅವರೊಂದಿಗೆ ಕೆಲಸ ಮಾಡಿದ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಭಾವನಾತ್ಮಕ ಪೋಸ್ಟ್ ಬರೆದಿದ್ದಾರೆ.ಪ್ರತಿದಿನ ಹೊಸ ಬೆಳಿಗ್ಗೆ, ಹೊಸ ಕೆಲಸ ಮತ್ತು ಇನ್ನೊಬ್ಬ ಸಹೋದ್ಯೋಗಿ ನಮ್ಮನ್ನು ಬಿಟ್ಟು ಹೋಗಿದ್ದಾರೆ… ಸತೀಶ್ ಶಾ, ಒಬ್ಬ ಮಹಾನ್ ಪ್ರತಿಭೆ, ತುಂಬಾ ಬೇಗನೆ ಹೋಗಿದ್ದಾರೆ ಇತ್ತೀಚಿನ ದಿನಗಳಲ್ಲಿ ಈ ದುಃಖ ಸಾಮಾನ್ಯವಲ್ಲ, ಆದರೆ ಜೀವನ ಮುಂದುವರಿಯುತ್ತದೆ ಮತ್ತು ಪ್ರದರ್ಶನ ಮುಂದುವರಿಯುತ್ತದೆ ಎಂದು ಅವರು ಬರೆದಿದ್ದಾರೆ.