
ಕಲಬುರಗಿ,ಫೆ.11-ಸಾಹಿತ್ಯ ಮತ್ತು ರಂಗಭೂಮಿಯು ಸಮಾಜದ ಒಳನೋಟಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಅತ್ಯುತ್ತಮ ವೇದಿಕೆಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಮನುಷ್ಯರನ್ನು ಕ್ರಿಯಾಶೀಲರನ್ನಾಗಿಸುವ, ಸೃಜನಶೀಲ ಚಿಂತನೆಗಳಿಗೆ ಹಚ್ಚುವ ರಂಗಭೂಮಿ ಕ್ಷೇತ್ರವನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ 5 ವರ್ಷಗಳ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಯ ಸಮಗ್ರ ಪ್ರಗತಿಗಾಗಿ ಜಿಲ್ಲಾಡಳಿತದಿಂದ ರೂಪಿಸಲಾಗಿರುವ “ಕಲಬುರಗಿ ನೆಕ್ಸ್ಟ್” ಎಂಬ ವಿನೂತನ ಯೋಜನೆಯ ಅಡಿಯಲ್ಲಿ, ಬೆಂಗಳೂರಿನ ರಂಗಶಂಕರದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ, ನಾಟಕೋತ್ಸವ, ಮಕ್ಕಳ ನಾಟಕೋತ್ಸವ, ನಾಟಕ ಸಂವಾದಗಳನ್ನು ಹಮ್ಮಿಕೊಂಡು ವಿವಿಧ ಆಯಾಮಗಳ ರಂಗಭೂಮಿ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.
ಕಲಬುರಗಿಯ ಎಸ್.ಎಂ ಪಂಡಿತ ರಂಗಮಂದಿರ, ರಂಗಾಯಣ, ಜಿಲ್ಲಾ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ, ಫೆಬ್ರವರಿ 21ರಿಂದ 28ರವರೆಗೆ ನಡೆಯುವ ಈ ನಾಟಕೋತ್ಸವದಲ್ಲಿ ಜಿಲ್ಲೆಯ ಎಲ್ಲಾ ರಂಗಾಸಕ್ತರು ಭಾಗಿಯಾಗಬೇಕೆಂದು ಕೋರಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯನ್ನು ಸಾಂಸ್ಕøತಿಕವಾಗಿ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕೊಡುಗೆ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.





















