ಜೀವನದಲ್ಲಿ ಸಾಧನೆ ಮುಖ್ಯ: ಚರಲಿಂಗ ಶ್ರೀಗಳು

ಕಲಬುರಗಿ,ಆ.30-ಇವತ್ತಿನ ಕಲಿಯುಗ ಮೊಬೈಲ್ ಕಂಪ್ಯೂಟರ್ ಬಂದು ನಮ್ಮ ಪದ್ಧತಿಯನ್ನು ಅವನತಿ ಸ್ಥಿತಿ ಎತ್ತ ಸಾಗುತ್ತಿದೆ. ಅದಕ್ಕೆಲ್ಲ ಹೇಳುವುದು ನಾವು ನಮ್ಮ ಪದ್ಧತಿಯಾದ ಪೂಜಾ ಪುನಸ್ಕಾರ ನೇಮ ನಿಷ್ಠೆಯನ್ನು ಪಾಲಿಸಿಕೊಂಡುಹೋಗಬೇಕು ಆದರೆ ಅವೆಲ್ಲ ಗಾಳಿಗೆ ತೂರಿದಂತೆ ನಮ್ಮ ಪದ್ಧತಿ ನಾವೇ ಹಾಳು ಮಾಡುವ ಸ್ಥಿತಿಯಲ್ಲಿ ನಾವಿದ್ದೇವೆ ಅದನ್ನು ಹೋಗಲಾಡಿಸಬೇಕಾದರೆ ಇಂಥ ಪುಣ್ಯ ಕಾರ್ಯಗಳು ಮಾಡುವುದರಿಂದ ಮನುಷ್ಯನ ಜೀವನದಲ್ಲಿ ನೆಮ್ಮದಿ ಸಿಗಲು ಸಾಧ್ಯವೆಂದು ಗದ್ದಿಗೆ ಮಠದ ಚರಲಿಂಗ ಮಹಾಸ್ವಾಮಿಗಳು ಹೇಳಿದರು.
ಇಲ್ಲಿಗೆ ಸಮೀಪದ ಜಂಬಗಾ (ಬಿ) ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಒಳ್ಳೆ ಮಾರ್ಗದತ್ತ ನಡೆಯುವುದನ್ನು ನಾವು ನಮ್ಮ ಮನೆಯಿಂದಲೇ ಪ್ರಾರಂಭಿಸಬೇಕು ಒಂದು ತಿಂಗಳ ಪಯರ್ಂತ ಪೂಜಾ, ಪುನಸ್ಕಾರ, ಕೀರ್ತನೆ, ಭಜನೆ ಹೀಗೆ ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವೆಂದು ಹೇಳಿದರು. ವೇದಿಕೆಯಲ್ಲಿ ಹತಗುಂದಿಯ ಭಾಗ್ಯವಂತಿ ದೇವಾಸ್ಥಾನದ ಮಾತೋಶ್ರೀ ಶಿವಲೀಲಾ ತಾಯಿಯವರು ಮುತ್ತೈದರ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.
ಸಿದ್ದು ದೇವರು, ಶಿವಪುತ್ರಪ್ಪ ಮಹಾರಾಜರು ಚಿಣಮಗೇರಿ ಉಭಯ ಶ್ರೀಗಳು ತಮ್ಮ ಆಶೀರ್ವಚನ ನೀಡಿದರು/
ನ್ಯಾಯವಾದಿ ಹನುಮಂತರಾಯ ಅಟ್ಟೂರ ಮಾತನಾಡಿ, ಜಂಬಗಾ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ನೋಡಿ ಮನಸ್ಸಿಗೆ ಬಹಳ ಆನಂದವಾಯಿತು.
ಪುಣ್ಯರ ನಾಡು ಈ ನಾಡಿನಲ್ಲಿ ಅನೇಕ ಮಠ ಮಂದಿರಗಳು ಇರುವದರಿಂದ ಇವತ್ತಿನ ಕಲಿಯುಗದಲ್ಲಿ ಸತ್ಸಂಗ ಸಮ್ಮೇಳನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಮಾಡುವದರಿಂದ ನಾವು ನೀವೆಲ್ಲರೂ ಜೀವನದಲ್ಲಿ ಸ್ವಾರ್ಥಕತೆ ಕಾಣಲು ಸಾಧ್ಯವೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ ಮಠಪತಿ ಧೂಳಯ್ಯ ಮಠಪತಿ.ಮಲ್ಕಣ್ಣ ಮುಲಗೆ.ವೀರಸಂಗಪ್ಪ ಬಿರಾದಾರ. ಪತ್ರಕರ್ತ ಅಂಬಾರಾಯ ಕೋಣೆ ಹಾಗೂ ಜಂಬಗಾ ಗ್ರಾಮದ ಗಣ್ಯಮಾನ್ಯ ವ್ಯಕ್ತಿಗಳು ಗ್ರಾಮದ ಪ್ರಮುಖರು ಇದ್ದರು. ಆಂಜನೇಯ ಗುತ್ತೇದಾರ, ಶ್ರೀಶೈಲ ಗುತ್ತೇದಾರ ಅವರಿಂದ ಸಂಗೀತ ಸೇವೆ, ಶರಣಬಸಪ್ಪ ಎಚ್ ಪಾಟೀಲ್ ಕಾರ್ಯಕ್ರಮ ನಿರೋಪಿಸಿದರು. ಉದಯಕುಮಾರ ಜಂಬಗಾ ಸರ್ವರನ್ನು ಸ್ವಾಗತಿಸಿದರು