ಬೈಕ್ ಮತ್ತು ಚಕ್ಕಡಿ ಗಾಡಿ ಮಧ್ಯೆ ಅಪಘಾತ; ಬೈಕ ಸವಾರ ಸ್ಥಳದಲ್ಲೆ ಸಾವು

ಜಮಖಂಡಿ:ಫೆ.8: ತಾಲೂಕಿನ ಗೋಠೆ ಗ್ರಾಮದಲ್ಲಿ ಕುದುರೆ ಚಕ್ಕಡಿ ಗಾಡಿ ಹಾಗೂ ಬೈಕ್ ಮದ್ಯ ಅಪಘಾತ ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ಜರುಗಿದೆ.

ತಾಲೂಕಿನ ಕಲಬೀಲಗಿಯಿಂದ ಗೋಠೆ ಗ್ರಾಮಕ್ಕೆ ಬೈಕ ಸವಾರ ತನ್ನ ಬದಿಯಲ್ಲಿ ತೆರಳುತ್ತಿದ್ದ ಎದುರಿಗೆ ಅಪ್ರಾಪ್ತ ಬಾಲಕ ಚಕ್ಕಡಿ ಗಾಡಿ ನಡೆಸಿಕೊಂಡು ಬರುತ್ತಿರುವಾಗ ನಿರ್ಲಕ್ಷತನದಿಂದ ಬೈಕ ಸವಾರನ ಮೇಲೆ ಹಾಯದು ಎದೆಗೆ ಗಂಭಿರ ಗಾಯಗೊಂಡಿರುವುದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಬೈಕ್ ಸವಾರ ಕಲಬಿಳಗಿ ಗ್ರಾಮದ ಬಂಡು ಪವಾರ (42) ಎಂದು ಗುರುತಿಸಲಾಗಿದೆ.

ಸಾವಳಗಿ ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಸ್ಥಳಕ್ಕೆ ಸಾವಳಗಿ ಪಿ.ಎಸ್.ಐ ಅಪ್ಪು ಐಗಳಿ ಅವರ ಪೆÇೀಲಿಸ ತಂಡ ಆಗಮಿಸಿ ತನಿಖೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಜಮಖಂಡಿ ತಾಲೂಕಾ ಸಾರ್ವಜನಿಕ ಅಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೆÇೀಲಿಸ ಮೂಲಗಳಿಂದ ತಿಳಿದು ಬಂದಿದ್ದು ಪ್ರಖರಣ ದಾಖಲಾಗಿದೆ. ಅಪರಾಧಿ ಅಪ್ರಾಪ್ತನಾಗಿರುವುದರಿಂದ ವಶಕ್ಕೆ ಪಡೆದಿಲ್ಲ ಎಂದು ತಿಳಿದು ಬಂದಿದೆ.