
ತಾಳಿಕೋಟೆ:ಅ.22: ಕ್ರೀಡೆ ಎಂಬುದು ದೈಹಿಕವಾಗಿ, ಮಾನಸಿಕವಾಗಿ ಮನುಷ್ಯನನ್ನು ಸದೃಡಗೊಳಿಸುವಂತಹದ್ದಾಗಿದೆ ಕ್ರೀಡೆಯಲ್ಲಿ ಭಾಗವಹಿಸುವದರಿಂದ ಉತ್ತಮ ಆರೋಗ್ಯವಂತರಾಗಿ ಬಾಳಲು ಸಾದ್ಯವಾಗಲಿದೆ ಎಂದು ತಾಲೂಕಾ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಬಿ.ವಾಯ್.ಕವಡಿ ಅವರು ಹೇಳಿದರು.
ಗುರುವಾರರಂದು ತಾಲೂಕಿನ ಮೈಲೇಶ್ವರ ಕ್ರಾಸ್‍ನ ಬ್ರೀಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮೈಧಾನದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ಸಹಾಯಕ ನಿರ್ದೇಶಕರು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ 2025-26ನೇ ಸಾಲಿನ ದಸರಾ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಎಂಬುದು ಬೆಳೆಸಿಕೊಳ್ಳಬೇಕಾಗಿದೆ ಶಾಲೆಯಿಂದ ಆಚೆಯೂ ಕೂಡಾ ಕ್ರೀಡಾಪಟುಗಳು ಅನೇಕ ಸಾಧನೆಗಳನ್ನು ಮಾಡಿ ವಿಶ್ವದಲ್ಲಿಯೇ ಪರಿಚಯಿಸಿಕೊಂಡಿದ್ದಾರೆ ಈ ದಸರಾ ಕ್ರೀಡಾಕೂಟವು ಎಲ್ಲ ಕ್ರೀಡಾಪಟುಗಳ ಭಾಗವಹಿಸುವದಕ್ಕಾಗಿ ಮತ್ತು ಅವರ ಸಾಧನೆಯನ್ನು ಗುರುತಿಸುವದಕ್ಕಾಗಿ ಅಲ್ಲದೇ ಎಲೆ ಮರೆ ಕಾಯಿಯಂತೆ ಕ್ರೀಡಾಪಟುಗಳಲ್ಲಿ ಅವಿತುಕೊಂಡಿರುವ ಕ್ರೀಡಾ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸಿ ಕ್ರೀಡಾ ಉತ್ಸಾಹವನ್ನು ತುಂಬುವಂತಹದ್ದಾಗಿದೆ ಕ್ರೀಡೆಯಲ್ಲಿ ಸೋತೆ ಎಂದು ಮಾನಸಿಕವಾಗಿ ಕುಗ್ಗುವದು ಬೇಡಾ ಗೆದ್ದೆ ಎಂಬ ಅಹಂಭಾವ ಬೇಡಾ ಮುಂದೊಂದು ದಿನ ಸೋಲೆ ಗೆಲುವಿನ ಸೋಪಾನವಾಗಲಿದೆ ಎಂದರು.
ಇನ್ನೋರ್ವ ಬ್ರೀಲಿಯಂಟ್ ಶಾಲಾ ಕಾರ್ಯದರ್ಶಿಯಾದ ಎಂ.ಬಿ.ಮಡಿವಾಳರ ಅವರು ಮಾತನಾಡಿ ಮೈದಾನಕ್ಕಿಳಿಯುವ ಕ್ರೀಡಾಪಟುಗಳು ಸ್ಪರ್ಧಾತ್ಮಕ ಮನೋಭಾವನೆ ಹೊಂದಿರಬೇಕು. ಅವರಲ್ಲಿರುವ ಸ್ಪರ್ಧಾತ್ಮಕ ಭಾವನೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ವಯಸ್ಸಿನ ಮಿತಿ ಇಲ್ಲದೇ ನಡೆಯುವ ಈ ದಸರಾ ಕ್ರೀಡಾಕೂಟದಲ್ಲಿ ಎಲ್ಲ ಕ್ರೀಡೆಗಳಿಗೆ ಪ್ರೋತ್ಸಾಹಿಸುವಂತಹ ಕೆಲಸ ಆಗಲಿದೆ ಕ್ರೀಡಾ ಮನೋಭಾವನೆಯಿಂದ ಆಟವನ್ನು ಆಡಿ ಸೋಲು ಗೆಲವು ಎಂಬುದು ಸಾಮಾನ್ಯವಾಗಿದೆ ಅದನ್ನು ಸಮಾನಾಗಿ ಸ್ವಿಕರಿಸಿಕೊಂಡು ಸೋಲು ಗೆಲುವಿನ ಸೋಪಾನ ಎಂಬ ತತ್ವದಡಿಯಲ್ಲಿ ಎಲ್ಲರೂ ಕ್ರೀಡೆಯಲ್ಲಿ ಆಟವನ್ನು ಆಡಬೇಕೆಂದರು.
ಸಮಾರಂಭದಲ್ಲಿ ಕ್ರೀಡಾಜ್ಯೋತಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ ಅವರು ಸ್ವಿಕರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬ್ರೀಲಿಯಂಟ್ ಶಾಲಾ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ ಅವರು ಕ್ರೀಡಾ ದ್ವಜಾರೋಹಣ ನೇರವೇರಿಸಿದರು.
ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್, ವ್ಹಾಲಿಬಾಲ್, ಪುಟಬಾಲ್, ಖೋಖೋ, ಕಬ್ಬಡ್ಡಿ, ಥ್ರೋಬಾಲ್, ಯೋಗಾಸನ, ಒಳಗೊಂಡು ಅನೇಕ ಕ್ರೀಡೆಗಳನ್ನು ಆಡಿಸಲಾಯಿತು.
ವೇದಿಕೆಯ ಮೇಲೆ ಮುದ್ದೇಬಿಹಾಳ ಯುವಜನ ಸಬಲಿಕರಣ ಇಲಾಖೆಯ ಸುರೇಶ ಆಲೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬೀರಗೊಂಡ, ದೈಹಿಕ ಶಿಕ್ಷಕರ ಸಂಘದ ಪ್ರಾಥಮಿಕ ಶಾಲಾ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಮರೇಕೂರ, ದೈಹಿಕ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ರಾಹುತ್ ಪೂಜಾರಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಸಜ್ಜನ, ಎಂ.ಎಸ್.ರಾಯಗೊಂಡ, ಎಚ್.ಎಲ್.ಬಜಂತ್ರಿ, ವಿಶ್ವನಾಥ ಪಾಟೀಲ, ಕವಡಿಮಟ್ಟಿ, ಹಾಗೂ ವಿವಿಧ ಶಾಲಾ ದೈಹಿಕ ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.